ಹೊಸಪೇಟೆ: ತುಂಗಾಭದ್ರ ಡ್ಯಾಂನ ಕ್ರಸ್ಟ್ಗೇಟ್ನ ಚೈನ್ ಲಿಂಕ್ ಕಟ್ ಆಗಲು, ಎಂಜಿನಿಯರ್ಗಳ ನಿರ್ಲಕ್ಷ್ಯ ಕಾರಣ ಎಂದು ರೈತ ಸಂಘದ ಮುಖಂಡ ಚಾಮರಸ ಮಾಲೀಪಾಟೀಲ್ ಆರೋಪಿಸಿದ್ದಾರೆ.
ತುಂಗ ಭದ್ರ ಡ್ಯಾಂನಲ್ಲಾಗಿರುವ ಸಮಸ್ಯೆಯ ಕುರಿತು ಮಾತನಾಡಿರುವ ಅವರು, ಬೇಸಿಗೆ ಕಾಲದಲ್ಲಿ, ಡ್ಯಾಂನಲ್ಲಿ ನೀರಿಲ್ಲದಂತಹ ಸಂದರ್ಭದಲ್ಲಿ ಕ್ರಸ್ಟ್ ಗೇಟ್ಗಳೆಲ್ಲವೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ. ಆದರೆ, ಆಗೆಲ್ಲ ಮೈಮರೆತು ಕುಳಿತುಕೊಳ್ಳುವ ಅಧಿಕಾರಿಗಳು, ಸಮಸ್ಯೆಯಾದಾಗ ಎಚ್ಚೆತ್ತುಕೊಳ್ಳುತ್ತಾರೆ. ಇದರಿಂದ ರೈತರಿಗೆ ನಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ.
ಇದೀಗ ಗೇಟ್ ಕಟ್ ಆಗಿ ಹೆಚ್ಚುವರಿ ನೀರು ಹರಿಯುತ್ತಿರುವ ಕಾರಣದಿಂದ ಸುಮಾರು ೬೦ ಟಿಎಂಸಿ ನೀರು ಹರಿದುಗೋಗುವ ಸಾಧ್ಯತೆಯಿರುತ್ತದೆ. ಈ ನೀರು ಪೋಲಾಗಿ ನದಿ ಸೇರುವುದರಿಂದ ಇನ್ನು ಮುಂದೆ ಮಳೆ ಕಡಿಮೆಯಾದರೆ, ರೈತರಿಗೆ ನೀರಿಗೆ ಸಮಸ್ಯೆಯಾಗುತ್ತದೆ. ಡ್ಯಾಂ ಭರ್ತಿಯಾಗುತ್ತಿದ್ದಂತೆ ಎರಡು ಬೆಳೆ ತೆಗೆಯಬಹುದು ಎಂಬ ನಿರೀಕ್ಷೆಯಿಟ್ಟುಕೊಂಡಿದ್ದ ರೈತರ ಆಸೆ ಮಣ್ಣುಪಾಲಾಗಲಿದೆ ಎಂದು ಕಿಡಿಕಾರಿದರು.
ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಚಾಮರಾಸಮಾಲೀಪಾಟೀಲ್ ಸೇರಿ ಅನೇಕರು ಡ್ಯಾಂಗೆ ಭೇಟಿ ನೀಡಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೇಗನೆ ಕ್ರಸ್ಟ್ ಗೇಟ್ ಸರಿಪಡಿಸಿ, ರೈತರ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
