ಅಪರಾಧ ಸುದ್ದಿ

ಉಡುಪಿಯಲ್ಲಿ ಪ್ರವಾಸಿಗರ ಭೋಟ್ ಮುಳುಗಿ ಇಬ್ಬರ ಸಾವು, ಇಬ್ಬರ ಸ್ಥಿತಿ ಗಂಭೀರ

Share It

ಉಡುಪಿ: ಉಡುಪಿಯಲ್ಲಿ ಪ್ರವಾಸಿಗರ ಬೋಟ್ ಮಗುಚಿ ಬಿದ್ದಿದ್ದು, 17 ಸಮುದ್ರಪಾಲಾಗಿದ್ದು, ಅವರ ಪೈಕಿ ಇಬ್ಬರು ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಕೋಡಿಬೆಂಗ್ರೆಯಲ್ಲಿ ನಡೆದಿದೆ.

ಪ್ರವಾಸಿಗರ ನಿರ್ಲಕ್ಷ್ಯದಿಂದಾಗಿಯೇ ಬೋಟ್ ಮಗುಚಿಬಿದ್ದಿರಬಹುದು ಎಂದು ಶಂಕಿಸಲಾಗಿದ್ದು, ಈ ವೇಳೆ ಬೋಟ್‌ನಲ್ಲಿದ್ದವರ ಪೈಕಿ ಶಂಕರಪ್ಪ (22) ಸಿಂಧು (೨೩) ಸಾವನ್ನಪ್ಪಿದ್ದಾರೆ. ಧರ್ಮರಾಜ್ (26) ದಿಶಾ (26) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

17 ಜನ ಪ್ರವಾಸಿಗರ ಪೈಕಿ 14ಜನಕ್ಕೆ ಮಾತ್ರವೇ ಬೋಟ್ ಸಿಬ್ಬಂದಿ ಲೈಫ್ ಜಾಕೆಟ್ ನೀಡಿದ್ದರು ಎನ್ನಲಾಗಿದೆ. ಉಳಿದವರಿಗೆ ಜಾಕೆಟ್ ಇರಲಿಲ್ಲ, ಹೀಗಾಗಿ, ಬೋಟ್ ಮಗುಚಿಬಿದ್ದಿದೆ. ಮತ್ತೊಂದು ಮೀನುಗಾರಿಕೆ ಬೋಟ್‌ನಲ್ಲಿದ್ದವರು ಮುಳುಗುತ್ತಿದ್ದ ಕೆಲವರನ್ನು ರಕ್ಷಣೆ ಮಾಡಿದ್ದಾರೆ.


Share It

You cannot copy content of this page