ನವದೆಹಲಿ: ಹ್ಯಾಂಡ್ ಶೇಕ್ ನಿರಾಕರಣೆ ವಿವಾದ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಸಾಮಾನ್ಯವಾಗುತ್ತಿದ್ದು, ಅಂಡರ್-19 ವಿಶ್ವಕಪ್ ನಲ್ಲಿಯೂ ಮುಂದುವರಿದಿದೆ.
ಕ್ರೀಡೆಯೊಳಗೆ ರಾಜಕೀಯ ನುಸುಳುತ್ತಿದ್ದಂತೆ ಇಂತಹದ್ದೊAದು ನಾಟಕೀಯ ಪ್ರಸಹನ ನಡೆಯುವುದು ಸಾಮಾನ್ಯವಾಗಿದ್ದು, ಬಾಂಗ್ಲಾ-ಭಾರತ ನಡುವಿನ ಪಂದ್ಯದಲ್ಲಿ ಉಭಯ ನಾಯಕರು ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಿAದ ಶುರುವಾದ ಹ್ಯಾಂಡ್ ಶೇಕ್ ನಿರಾಕರಣೆ ರಾಜಕೀಯ ಇದೀಗ ಬಾಂಗ್ಲಾ ದೇಶಕ್ಕೂ ವ್ಯಾಪಿಸಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆಯನ್ನು ಉಲ್ಲೇಖಿಸಿ ಹ್ಯಾಂಡ್‌ಶೇಕ್ ನಿರಾಕರಣೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಬಾಂಗ್ಲಾ ಕ್ರಿಕೆಟಿಗರನ್ನು ಐಪಿಎಲ್‌ನಿಂದ ಬ್ಯಾನ್ ಮಾಡುವುದರಿಂದ ಆರಂಭವಾದ ಈ ರಾಜಕಾರಣ, ಬಾಂಗ್ಲಾ ತಂಡ ಭಾರತದಲ್ಲಿ ನಡೆಯುವ ಟಿ-20 ವಿಶ್ವಕಪ್ ಆಡದಿರಲು ತೀರ್ಮಾನಿಸುವುದ ಮಟ್ಟಿಗೆ ಬಂದು ತಲುಪಿದೆ. ಇದೀಗ ಅಂಡರ್ 19 ವಿಶ್ವಕಪ್‌ನಲ್ಲಿ ಈ ಬೆಳವಣಿಗೆ ನಡೆದಿದ್ದು, ಮುಂದೆ ಏನು ಖಾದು ನೋಡಬೇಕಿದೆ.

