ಬೆಂಗಳೂರು: ಯುಪಿಐ ಮೂಲಕ ಪಡೆಯುವ ಟಿಕೆಟ್ ಹಣವನ್ನು ದುರ್ಬಳಕೆ ಮಾಡಿಕೊಂಡ ಬೆನ್ನಲ್ಲೇ ಮೂವರು ಕಂಡಕ್ಟರ್‌ಗಳನ್ನು ಬಿಎಂಟಿಸಿ ಸಸ್ಪೆಂಡ್ ಮಾಡಿದೆ.
ಬಿಎಂಟಿಸಿಯ ವಿಚಕ್ಷಣ ವಿಭಾಗ ನಡೆಸಿದ ಕಾರ್ಯಾಚರಣೆಯಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ಲಿಂಕ್ ದುರ್ಬಳಕೆ ಮಾಡಿಕೊಂಡು ಹಣವನ್ನು ಸಂಸ್ಥೆಗೆ ಕಟ್ಟದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಮೂವರನ್ನು ಅಮಾನತು ಮಾಡಲಾಗಿದೆ.
ಈಶಾನ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಕಂಡಕ್ಟರ್ ಸುರೇಶ್ ಎಂಭುವವರನ್ನು 47,257 ರು. ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಡಿಸೆಂಬರ್ 5 ರಿಂದ ಅಮಾನತು ಮಾಡಲಾಗಿದೆ. ಅದೇ ರೀತಿ ದಕ್ಷಿಣ ವಿಭಾಗದ ಡ್ರೈವರ್ ಕಂ ಕಂಡಕ್ಟರ್ ಮಂಚೇಗೌಡ ಎಂಬುವವರನ್ನು 54,358 ರು. ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಡಿಸೆಂಬರ್ 16 ರಿಂದ ಅಮಾನತು ಮಾಡಲಾಗಿದೆ.
ಈಶಾನ್ಯ ವಿಭಾಗದ ಮತ್ತೊಬ್ಬ ಕಂಡಕ್ಟರ್ ಅಶ್ವಕ್ ಖಾನ್ ಎಂಬುವವರನ್ನು 3206 ರು. ಟಿಕೆಟ್ ಹಣ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಡಿಸೆಂಬರ್ 17 ರಿಂದ ಸೇವೆಯಿಂದ ವಜಾಗೊಳಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಆದೇಶ ಅನ್ವಯ ಶಿಸ್ತು ಕ್ರಮವನ್ನು ಕೈಗೊಳ್ಳಳಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

