ಆರೋಗ್ಯ ಉಪಯುಕ್ತ ಸುದ್ದಿ

ನೊಣ ಹಾಗೂ ಸೊಳ್ಳೆ ಗಳ ಕಾಟವೇ? ಹೀಗೆ ಮಾಡಿದ್ರೆ ಸಾಕು ಸೊಳ್ಳೆ, ನೊಣಗಳು ಮಾಯವಾಗುತ್ತಿವೆ!

Share It

ಮನುಷ್ಯ ಸಂತೋಷದಿಂದ ಬದುಕಬೇಕಾದರೆ ಬಾಹ್ಯ ಹಾಗೂ ಆಂತರಿಕ ಸ್ವಚ್ಛತೆ ಬಹಳ ಮುಖ್ಯ. ಆಂತರಿಕ ಸ್ವಚ್ಛತೆ ಅವರವರಿಗೆ ಬಿಟ್ಟದ್ದು ಆದ್ರೆ ಬಾಹ್ಯ ಸ್ವಚ್ಛತೆ ಇರಲೇ ಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ಸೊಳ್ಳೆ ಹಾಗೂ ನೊಣಗಳ ಕಾಟ ಹೆಚ್ಚಾಗುತ್ತದೆ. ಇದರಿಂದ ನಮ್ಮ ನೆಮ್ಮದಿ ಸಹ ಕೆಡುತ್ತದೆ. ನಿಮ್ಮ ಮನೆಯಲ್ಲಿ ಸೊಳ್ಳೆ ಹಾಗೂ ನೊಣಗಳ ಕಾಟ ಇದೆಯಾ ಆಗಿದ್ರೆ ಈ ಒಂದು ಟ್ರಿಕ್ ಬಳಸಿ ಸಾಕು. ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ.

ಇಂದು ಮಾರುಕಟ್ಟೆಯಲ್ಲಿ ಸೊಳ್ಳೆಗಳು ಹಾಗೂ ನೊಣಗಳಿಂದ ಉಪಶಮನ ಪಡೆಯಲು ಸಾಕಷ್ಟು ಪ್ರಮಾಣದ ರಾಸಾಯನಿಕ ಹಾಗೂ ಕೆಮಿಕಲ್ ಗಳು ಸಿಗುತ್ತವೆ. ಇವು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ದೇಹಕ್ಕೆ ಹಾನಿಯನ್ನು ಉಂಟುಮಾಡುತ್ತವೆ. ಆದ್ದರಿಂದ ನಮ್ಮ ಮನೆಯಲ್ಲಿಯೇ ಲಭ್ಯವಿರುವ ವಸ್ತುಗಳನ್ನು ತೆಗೆದುಕೊಂಡು ಔಷಧಿಯನ್ನು ಸಿದ್ದ ಪಡಿಸಿಕೊಳ್ಳಬಹುದು. 

ನಿಮ್ಮ ಮನೆಯಲ್ಲಿ ಸಿಗುವ ನಿಂಬೆಯ ರಸ ಹಾಗೂ ಆಲಂ ಎರಡನ್ನೂ ನೀರಿನೊಂದಿಗೆ ಮಿಶ್ರಣ ಮಾಡಿ ನಿಮ್ಮ ಮನೆಯ ಭಾಗಗಳಿಗೆ ಸಿಂಪಡಣೆ ಮಾಡಿ. ಇದು ಕೇವಲ ಸೊಳ್ಳೆ ನೊಣಗಳಷ್ಟೇ ಅಲ್ಲ. ಬ್ಯಾಕ್ಟೀರಿಯಾಗಳನ್ನು ಕೊಳ್ಳುವ ಗುಣವನ್ನು ಹೊಂದಿದೆ. ಇವುಗಳು ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವನ್ನು ಬೀರುವುದಿಲ್ಲ.

ತಯಾರಿಸುವ ವಿಧಾನ: ಮೊದಲು ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬೆಯ ರಸವನ್ನು ಹಾಕಿ. ಬಳಿಕ ಆಲಂ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ನೆಲವನ್ನು ಹೊರೆಸುವಾಗ ಇದನ್ನು ಬಳಕೆ ಮಾಡಿಕೊಂಡು ಒರೆಸುದರೆ ಒಂದೇ ಒಂದು ಸೊಳ್ಳೆ ಅಥವಾ ನೊಣಗಳು ಬಂದು ಕೂರುವುದಿಲ್ಲ. ನಿತ್ಯ ಇದನ್ನು ಬಳಕೆ ಮಾಡುವುದರಿಂದ ಬಹುತೇಕ ಕೀಟಾಣುಗಳು ನಾಶವಾಗುತ್ತವೆ. ಇದನ್ನು ಸಿಂಪಡಣೆ ಮಾಡುವುದರಿಂದ ದುರ್ಗಂಧ ದೂರಾಗುತ್ತದೆ.

ನಿಂಬೆ ರಸವು ಸಿಟ್ರಿಕ್ ಆಮ್ಲವನ್ನು  ಹೊಂದಿರುತ್ತದೆ ಇದು ಕೀಟಗಳನ್ನು ಕೊಳಲು ಸಹಕಾರಿಯಾಗಿದೆ. ಜೊತೆಗೆ ಆಲಂ ಸಹಾಯ ನಿಂಬೆ ರಸಕ್ಕೆ ಪೂರವಾಗಿ ಕೆಲಸ ಮಾಡುತ್ತದೆ.  ಸಂಶೋಧನೆಯ ಪ್ರಕಾರ ನಿಂಬೆ ರಸವು ಸೊಳ್ಳೆಗಳನ್ನು ದೂರ ಹೊಡಿಸುತ್ತದೆ. ಆಲಂ ಸೊಳ್ಳೆಗಳು ಹಾಗೂ ನೊಣಗಳು ಮೊಟ್ಟೆಯನ್ನು ಇಡಾದ ಹಾಗೆ ನೋಡಿಕೊಳ್ಳುತ್ತೆ.


Share It

You cannot copy content of this page