ಶಿರಸಿ : ಡಿಜಿಟಲ್ ಅರೆಸ್ಟ್ ಭೀತಿ ಹುಟ್ಟಿಸಿದ ಸೈಬರ್ ಕಳ್ಳರು ನಿವೃತ್ತ ಶಿಕ್ಷಕರೊಬ್ಬರಿಂದ ೧.೬೧ ಕೋಟಿ ರು. ವಸೂಲಿ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶಿರಸಿ ತಾಲೂಕಿನ ಮುಂಡಗೋಡು ಟಿಬೆಟಿಯನ್ ಕಾಲೋನಿಯ ನಿವೃತ್ತ ಶಿಕ್ಷಕ ಪಾಲ್ಡೆನ್ ಎಂಬುವವರೇ ವಂಚನೆಗೊಳಗಾದವರು. ಮುಂಬೈ ಕೋಲಾಬಾ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿರುವುದಾಗಿ ಮಾತನಾಡಿದ ವ್ಯಕತಿ, ಬಂಧಿತರಾಗಿರುವ ಉಗ್ರರು ನಿಮ್ಮ ಎಟಿಎಂ ಕಾರ್ಡ್ ಬಳಸಿದ್ದಾರೆ ಎಂದು ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದು, ಶಿಕ್ಷಕರಿಂದ ೧.೬೧ ಕೋಟಿ ವಸೂಲಿ ಮಾಡಿದ್ದಾನೆ.
ಪೊಲೀಸ್ ಸಮವಸ್ತçದಲ್ಲಿ ಕರೆ ಮಾಡಿ, ಉಗ್ರ ಚಟುವಟಿಕೆ ಮತ್ತು ಮನಿ ಲಾಂಡ್ರಿAಗ್ ಬಗ್ಗೆ ಮಾತನಾಡಿದ್ದಕ್ಕೆ ಹೆದರಿದ ಶಿಕ್ಷಕರು ತಮ್ಮ ಬಳಿಯಿದ್ದ ಎಲ್ಲ ಹೂಡಿಕೆಯ ಜತೆಗೆ ಸ್ನೇಹಿತರು ಮತ್ತು ಸಂಬAಧಿಕರಿAದ ಸಾಲ ಪಡೆದು, ಹಣ ಕಟ್ಟಿದ್ದಾರೆ. ಅನಂತರ ಅವರು ಮೋಸ ಹೋಗಿರುವುದು ಗೊತ್ತಾಗಿ ಕಾರವಾರದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

