ಅಪರಾಧ ರಾಜಕೀಯ ಸುದ್ದಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಕೇಸ್ ದಾಖಲಿಸಿಕೊಂಡ ಸಿಬಿಐ

Share It

ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂ. ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಸಹಕಾರ ಬ್ಯಾಂಕ್‌ ಅಧ್ಯಕ್ಷರನ್ನು ಸಿಐಡಿ, ಎಸ್ಐಟಿ ಇತ್ತೀಚೆಗೆ ಬಂಧಿಸಿತ್ತು. ಮತ್ತೊಂದೆಡೆ ಈ ಪ್ರಕರಣ ಸಂಬಂಧ ಯೂನಿಯನ್ ಬ್ಯಾಂಕ್ ಅಧಿಕಾರಿಗಳ ದೂರಿನ ಮೇರೆಗೆ ಸಿಬಿಐ ಎಫ್​ಐಆರ್ ದಾಖಲಿಸಿಕೊಂಡಿದೆ.

ಬ್ಯಾಂಕ್​ನ ಮೂವರು ಅಧಿಕಾರಿಗಳು ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ. ಸಚಿವ ನಾಗೇಂದ್ರಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಬೆಂಗಳೂರು ಪೂರ್ವ ವಲಯದ ಡಿಜಿಎಂ ಜೆ. ಮಹೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಯೂನಿಯನ್ ಬ್ಯಾಂಕ್​ನ ಮೂವರು ಅಧಿಕಾರಿಗಳು ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸರ್ಕಾರಿ ಅಧಿಕಾರಿಗಳು,‌ ಜನಪ್ರತಿನಿಧಿಗಳು, ಖಾಸಗಿ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸದ್ಯ ಎಸ್ಐಟಿಯಲ್ಲಿರುವ ಈ ಕೇಸ್ ಸಿಬಿಐಗೆ ವರ್ಗಾವಣೆ ಆಗುವ‌ ಸಾಧ್ಯತೆ ಹೆಚ್ಚಾಗಿದೆ. ಎಸ್ಐಟಿ ವರ್ಗಾವಣೆಗೆ ನಿರಾಕರಿಸಿದ್ದೆ ಆದಲ್ಲಿ ಸಿಬಿಐ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.

ವಾಲ್ಮೀಕಿ ನಿಗಮದ 94.73 ಕೋಟಿ ರೂ. ಹಣವನ್ನು ದೋಚುವಲ್ಲಿ ಸತ್ಯನಾರಾಯಣ ಪ್ರಮುಖ ಆರೋಪಿ. ಯೂನಿಯನ್‌ ಬ್ಯಾಂಕ್‌ನಲ್ಲಿರುವ ನಿಗಮದ ಖಾತೆಯಿಂದ 18 ನಕಲಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಆಗಿತ್ತು. ಈ ವಂಚನೆಯ ಜಾಡು ಬೆನ್ನತ್ತಿದಾಗ ಫೈನಾನ್ಸ್‌ ಕಂಪನಿ ಸತ್ಯನಾರಾಯಣ ಅವರೇ 18 ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುತಬಂದಿದೆ.

ಈ ಬೆನ್ನಲ್ಲೇ ತನಿಖಾ ತಂಡ ಹೈದರಾಬಾದ್‌ಗೆ ತೆರಳಿ ಸತ್ಯನಾರಾಯಣ ಅವರನ್ನು ಸಿಐಡಿ ಕಚೇರಿಗೆ ಕರೆತಂದಿತ್ತು. ಬಳಿಕ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯದಿಂದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಜೂನ್ 12 ರವರೆಗೆ ಕಸ್ಟಡಿಗೆ ಪಡೆಯಲಾಗಿದೆ ಎಂದು ಎಸ್‌ಐಟಿ ಮೂಲಗಳು ಖಚಿತಪಡಿಸಿವೆ. ಇದೀಗ ಡಿಜಿಎಂ ಜೆ. ಮಹೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಐವರ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿಕೊಂಡಿದೆ.

ಸಿಬಿಐನಿಂದ ಸಚಿವರಿಗೆ ನೋಟಿಸ್?
ಎಸ್ಐಟಿಯಲ್ಲಿರುವ ಈ ಕೇಸ್ ಸಿಬಿಐಗೆ ವರ್ಗಾವಣೆ ಆಗುವ‌ ಸಾಧ್ಯತೆ ಹೆಚ್ಚಾಗಿದೆ. ಎಸ್ಐಟಿ ವರ್ಗಾವಣೆಗೆ ನಿರಾಕರಿಸಿದ್ದೆ ಆದಲ್ಲಿ ಸಿಬಿಐ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಸಿಬಿಐಗೆ ಕೇಸ್ ಬಂದರೆ ಈ ಪ್ರಕರಣದಲ್ಲಿ ಹೆಸರು ಕೇಳಿಬರುತ್ತಿರುವ ಸಚಿವ ನಾಗೇಂದ್ರ ಅವರಿಗೂ ನೋಟಿಸ್ ನೀಡಿ ವಿಚಾರಣೆ ಮಾಡುವ‌ ಸಾಧ್ಯತೆ ಇದೆ.


Share It

You cannot copy content of this page