ಹೊಸಕೋಟೆ : ವರ್ತೂರ್ ಸಂತೋಷ್ ಹೊಸಕೋಟೆಯಲ್ಲಿ ನಡೆರೇಸ್ ಸಂದರ್ಭದಲ್ಲಿ ಹೊಸಕೋಟೆಯ ಜನರಿಗೆ ಮೋಸ ಮಾಡಿ ನಾನು ಏನು ಮಾಡಿಲ್ಲ ಎಂಬ ರೀತಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಂತೋಷ್ ಅವರ ಆತ್ಮೀಯನಾಗಿದ್ದ ಹೊಸಕೊಟೆ ಬೀರೇಶ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಕಾರ್ ಎಂಬ ಹೆಸರಿಗೂ ವರ್ತೂರ್ ಸಂತೋಷ್‌ಗೂ ಸಂಬಂಧವಿಲ್ಲ. ಸಂತೋಷ್ ಒಬ್ಬ ದಲ್ಲಾಳಿಯಾಗಿದ್ದ. ಹೊಸಕೋಟೆಯಲ್ಲಿ ರೇಸ್ ಮಾಡುವ ಸಂದರ್ಭದಲ್ಲಿ ಸ್ಥಳೀಯರಿಂದ 15 ಲಕ್ಷಕ್ಕೂ ಅಧಿಕ ಸಹಾಯ ಧನ ಮಾಡಿಸಿ ನಾನು ವೈಯಕ್ತಿಕವಾಗಿ ನೀಡಿದ್ದೇನೆ. ಆದರೆ ಈಗ ಎಲ್ಲರೂ ನನ್ನ ಹೆಸರು ಬಳಿಸಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
ಬಿಗ್ ಬಾಸ್‌ಗೆ ಹೋದೆ ಸಂದರ್ಭದಲ್ಲಿ ಹೊಸಕೋಟೆಯ ಜನ ಬೆನ್ನೆಲುಬಾಗಿ ನಿಂತು ಸಹಾಯ ಮಾಡಿದ್ದಾರೆ. ಆದರೆ ಈಗ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಮಾಧ್ಯಮದವರ ಮುಂದೆ ನಾನು ದಾಖಲೆ ಸಮೇತ ಬರುತ್ತೇನೆ. ನೀವು ಸಹ ಬಂದು ನಿಮ್ಮ ಮಾಹಿತಿ ನೀಡಿ ಎಂದು ಸವಾಲ್ ಹಾಕಿದ್ದಾರೆ.
400 ಜೋಡಿಗಳ ಎತ್ತುಗಳಿಗೆ 3000
ಸಾವಿರದಂತೆ 12 ಲಕ್ಷ ಹಾಗೂ ಇತರೆ 18 ಲಕ್ಷದಂತೆ ಒಟ್ಟು 30 ಲಕ್ಷಕ್ಕೂ ಅಧಿಕ ಹಣ ಸಹಾಯ ಪಡೆದು ಯಾರೂ ಒಂದು ರೂಪಾಯಿ ಸಹ ನೀಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಸಾಕ್ಷಿ ಸಮೇತ ನಾನು ಚರ್ಚೆಗೆ ಬರುತ್ತೇನೆ. ಸಾಧ್ಯವಾದರೆ ನೀನು ಬರಬಹುದು. ನಮ್ಮ ಪ್ರಶ್ನೆಗೆ ಉತ್ತರಿಸದೆ ಜನರನ್ನು ಯಾಮಾರಿಸಿಕೊಂಡು ಬರುತ್ತಿದ್ದಾನೆ. ತಲೆಯಲ್ಲಿ ಬುದ್ದಿ ಇರುವವರನ್ನು ಯಾಮಾರಿಸಲು ಸಾಧ್ಯವಿಲ್ಲ.
ತಲೆಯಲ್ಲ విగా ಹಾಕಿರುವವರನ್ನು ಮಾತ್ರ ಯಾಮಾರಿಸಬಹುದು ಎಂದು ವ್ಯಂಗ್ಯ ಮಾಡಿದ್ದಾರೆ.
ವರ್ತೂರ್ ಸಂತೋಷ್ ಮಾಡುವ ಉದ್ದೇಶ ಅವರ ವೈಯಕ್ತಿಕ ಲಾಭಕ್ಕಾಗಿ ಯಾವುದೇ ರೀತಿಯಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅವರ ಉದ್ದೇಶವಲ್ಲ. ಹೊಸಕೋಟೆಯ” ಜನರನ್ನು ರೇಸ್ ಹೆಸರಿನಲ್ಲಿ ಮಂಕು ಎರಚಿದ್ದು ಆಯ್ತು. ಈಗ ಮಾಲೂರು ತಾಲ್ಲೂಕಿನ ಜನರಿಗೆ ಮೋಸ ಮಾಡಲು ಮುಂದಾಗುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ರೇಸ್‌ನಲ್ಲಿ ಸಹಾಯ ಮಾಡಿ ಮೋಸ ಹೋದಂತಹ ಶಾಂತರಾಜು, ರಿತೇಶ್, ಮಂಜುನಾಥ್ ಹಾಗೂ ಇತರರು ಇದ್ದರು.