ವಯನಾಡ್ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 316 ಕ್ಕೆ ಏರಿಕೆ!
ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಗುಡ್ಡ ಕುಸಿತ ಮತ್ತು ಭೂಕುಸಿತ ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 316 ಕ್ಕೆ ಏರಿದೆ.
ಸಾವನ್ನಪ್ಪಿದವರಲ್ಲಿ 29 ಮಕ್ಕಳೂ ಸಹ ಸೇರಿವೆ. ಆದಾಗ್ಯೂ 200 ಕ್ಕೂ ಹೆಚ್ಚಿನ ಜನರು ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡ್ರೋನ್ ಮೂಲಕ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿ ಬದುಕಿ ಉಳಿದಿರುವ ಮತ್ತು ಸಾವನ್ನಪ್ಪಿದವರ ಶವಗಳಿಗಾಗಿ ಹುಡುಕಾಟ ಮುಂದುವರೆದಿದೆ.


