ಫ್ಯಾಷನ್ ಸಿನಿಮಾ ಸುದ್ದಿ

ಗಣರಾಜ್ಯೋತ್ಸವದಂದು ವಿಜಯ್ ದೇವರಕೊಂಡ–ರಶ್ಮಿಕಾ ಚಿತ್ರಕ್ಕೆ ಹೆಸರು: ಅಭಿಮಾನಿಗಳಲ್ಲಿ ಕುತೂಹಲ

Share It

ವಿಜಯ್ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ ಹೊಸ ಸಿನಿಮಾ ‘VD14’ ಕುರಿತ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಈ ಚಿತ್ರಕ್ಕೆ ಅಧಿಕೃತ ಶೀರ್ಷಿಕೆಯನ್ನು 2026ರ ಜನವರಿ 26ರಂದು, ಗಣರಾಜ್ಯೋತ್ಸವದ ದಿನವೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ಈ ಪಿರಿಯಡ್ ಆಕ್ಷನ್ ಡ್ರಾಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದು, ಈ ಜೋಡಿ ಮತ್ತೆ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ವಿಶೇಷ ಸಂತಸ ತಂದಿದೆ. ರಾಹುಲ್ ಸಾಂಕೃತ್ಯಾನ್ ನಿರ್ದೇಶನದ ಈ ಚಿತ್ರವನ್ನು ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಅವರು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದು, ಟಿ-ಸೀರೀಸ್ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ.

1854 ರಿಂದ 1878ರ ಅವಧಿಯ ಬ್ರಿಟಿಷ್ ಭಾರತದ ಹಿನ್ನೆಲೆಯಲ್ಲಿನ ನೈಜ ಐತಿಹಾಸಿಕ ಘಟನೆಗಳನ್ನು ಆಧರಿಸಿ ಕಥೆಯನ್ನು ರೂಪಿಸಲಾಗಿದೆ. ಚಿತ್ರದ ಶೀರ್ಷಿಕೆ ಅನಾವರಣದ ಬಗ್ಗೆ ಹಂಚಿಕೊಂಡಿರುವ ಅನೌನ್ಸ್ಮೆಂಟ್ ಪೋಸ್ಟರ್‌ನಲ್ಲಿ, ಮರಳುಗಾಡಿನ ಮಧ್ಯೆ ಜನಸಮೂಹ ಒಂದೇ ದಿಕ್ಕಿನಲ್ಲಿ ಸಾಗುತ್ತಿರುವ ದೃಶ್ಯ ಕಾಣಿಸಿಕೊಂಡಿದ್ದು, ಭಾರೀ ಯುದ್ಧ ಅಥವಾ ಕ್ರಾಂತಿಯ ಸನ್ನಿವೇಶವಿರಬಹುದು ಎಂಬ ಸುಳಿವು ನೀಡಿದೆ. ಇತ್ತೀಚೆಗೆ ಬಿಡುಗಡೆಗೊಂಡ ಝಲಕ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ರಾಹುಲ್–ವಿಜಯ್ ಕಾಂಬಿನೇಷನ್ ಮತ್ತೆ: ‘ಟ್ಯಾಕ್ಸಿವಾಲಾ’ (2018) ಚಿತ್ರದ ಬಳಿಕ ನಿರ್ದೇಶಕ ರಾಹುಲ್ ಸಾಂಕೃತ್ಯಾನ್ ಮತ್ತು ವಿಜಯ್ ದೇವರಕೊಂಡ ಮತ್ತೆ ಕೈಜೋಡಿಸಿರುವುದು ಈ ಚಿತ್ರದ ಮತ್ತೊಂದು ಹೈಲೈಟ್. ವಿಜಯ್ ಅವರ ಹುಟ್ಟುಹಬ್ಬದ ಸಂದರ್ಭ ಬಿಡುಗಡೆಗೊಂಡ ಮೊದಲ ಝಲಕ್‌ನಲ್ಲಿ, ಅವರು ಬೆನ್ನು ತಿರುಗಿಸಿ ಧ್ಯಾನಮಗ್ನ ಭಂಗಿಯಲ್ಲಿ ಕುಳಿತಿರುವ ದೃಶ್ಯ ಗಮನ ಸೆಳೆದಿತ್ತು. ಉದ್ದ ಕೂದಲು ಮತ್ತು ದೃಢ ದೇಹಸೌಷ್ಟವ ನೆರಳಿನ ಮೂಲಕ ಅನಾವರಣಗೊಂಡಿತ್ತು.

ಅಂತರರಾಷ್ಟ್ರೀಯ ನಟನ ಎಂಟ್ರಿ: ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಲು ಮತ್ತೊಂದು ಕಾರಣ ಎಂದರೆ, ದಿ ಮಮ್ಮಿ (1999) ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಪ್ರಸಿದ್ಧರಾದ ದಕ್ಷಿಣ ಆಫ್ರಿಕಾದ ನಟ ಅರ್ನಾಲ್ಡ್ ವೊಸ್ಲೂ ಅವರ ಸೇರ್ಪಡೆ. ಅವರು ಈ ಸಿನಿಮಾದಲ್ಲಿ ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಟ ವಿನೋದ್ ಸಾಗರ್ ಹಂಚಿಕೊಂಡಿದ್ದ ಸೆಟ್‌ನ ಫೋಟೋ ವೈರಲ್ ಆದ ಬಳಿಕ ಈ ವಿಚಾರಕ್ಕೆ ಇನ್ನಷ್ಟು ಬಲ ಬಂದಿದೆ.

ರಶ್ಮಿಕಾ ಬ್ಯುಸಿ ಶೆಡ್ಯೂಲ್: ಕೆಲಸದ ವಿಚಾರಕ್ಕೆ ಬಂದರೆ, ರಶ್ಮಿಕಾ ಮಂದಣ್ಣ ಕೊನೆಯದಾಗಿ ‘ದಿ ಗರ್ಲ್‌ಫ್ರೆಂಡ್’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ 2025ರ ನವೆಂಬರ್ 7ರಂದು ಬಿಡುಗಡೆಯಾಗಿ, ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದರ ಜೊತೆಗೆ ಅವರು ಶಾಹಿದ್ ಕಪೂರ್ ಹಾಗೂ ಕೃತಿ ಸನೋನ್ ಅಭಿನಯದ ‘ಕಾಕ್ಟೈಲ್ 2’ ಚಿತ್ರೀಕರಣದಲ್ಲೂ ತೊಡಗಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಅವರ ಈ ಹೊಸ ಸಿನಿಮಾ 2026ರ ಆಗಸ್ಟ್ ರಿಂದ ಅಕ್ಟೋಬರ್ ನಡುವಿನ ಅವಧಿಯಲ್ಲಿ ತೆರೆಗೆ ಬರಬಹುದೆಂಬ ನಿರೀಕ್ಷೆಯಿದೆ.


Share It

You cannot copy content of this page