ವಿಜಯಲಕ್ಷ್ಮಿ ದರ್ಶನ್ ದೂರು: ಆರೋಪಿಗಳ ಪತ್ತೆ 3 ಸಿಸಿಬಿ ತಂಡ

Share It

ಬೆಂಗಳೂರು: ನಟ ದರ್ಶನ್ ಪತ್ನಿ ನೀಡಿರುವ ದೂರಿಗೆ ಸಂಬಂಧಿಸಿದಂತೆ ಸೈಬರ್ ಪೊಲೀಸರು, ಮೂರು ತಂಡಗಳನ್ನು ರಚಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಸುದೀಪ್ ಹೇಳಿಕೆಗೆ ತಿರುಗೇಟು ನೀಡಿದ ವಿಜಯಲಕ್ಷ್ಮಿ ಹೇಳಿಕೆಯ ನಂತರ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಗೂ ನಿಂದನೆಯ ಮೆಸೇಗಳನ್ನು ಕಳುಹಿಸಲಾಗಿತ್ತು. ಇದರಿಂದ ಬೇಸತ್ತ ವಿಜಯಲಕ್ಷ್ಮಿ ದರ್ಶನ್ ಅವರು, ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಅನ್ವಯ 18 ಖಾತೆಗಳ ಮಾಹಿತಿಯನ್ನು ಕೇಳಿ ಪೊಲೀಸರು ಮೆಟಾ ಕಂಪನಿಗೆ ಪತ್ರ ಬರೆದಿದ್ದು, ಮಾಹಿತಿ ಬಂದ ನಂತರ ಅದು ನಕಲಿ ಖಾತೆಯೇ ಅಥವಾ ನಿಜವಾದ ಖಾತೆಗಳೇ ಎಂಬುದನ್ನು ತಿಳಿದುಕೊಂಡು ಕಾರ್ಯಾಚರಣೆ ನಡೆಸಲಿದ್ದಾರೆ.

ಆರೋಪಿಗಳ ಪತ್ತೆ ಮತ್ತು ಸೈಬರ್ ಸಂಬಂಧಿತ ವಿಚಾರಣೆಗಳಿಗಾಗಿ ಸಿಸಿಬಿ ಮೂರು ತಂಗಳನ್ನು ರಚನೆ ಮಾಡಿದೆ. ಈ ತಂಡ 18 ಸೋಷಿಯಲ್ ಮೀಡಿಯಾ ಬಳಕೆದಾರರ ಮೇಲೆ ನಿಗಾಯಿಟ್ಟಿದೆ. ಅವರನ್ನು ಪತ್ತೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಡಿ.21 ರವರೆಗೆ ಮೆಸೇಜ್ ಮಾಡಿದ ಖಾತೆಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.


Share It

You May Have Missed

You cannot copy content of this page