ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಂ.2 ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ಸದ್ಯ ಕೊಡಗಿನ ಖಾಸಗಿ ರೆಸಾರ್ಟ್ ಗೆ ಮಗನ ಜತೆಗೆ ಶಿಫ್ಟ್ ಆಗಿದ್ದಾರೆ.
ದರ್ಶನ್ ಬೆಳವಣಿಗೆಗಳು ಹಾಗೂ ಈ ಬಗ್ಗೆ ನಿರಂತರ ಕರೆಗಳು ಬರುತ್ತಿರುವ ಕಾರಣ ವಿಜಯಲಕ್ಷ್ಮೀ ಅವರು ಕೊಡಗಿನ ಖಾಸಗಿ ರೆಸಾರ್ಟ್ ನಲ್ಲಿ ತಂಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ದರ್ಶನ್ ಸತ್ಯ ಮೇಲುಗೈ ಸಾಧಿಸಲಿದೆ, ತಾಳ್ಮೆಯಿಂದಿರಿ ಎಂದು ವಿಜಯಲಕ್ಷ್ಮೀ ಅವರು ದರ್ಶನ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದರು.