ಅಪರಾಧ ಸುದ್ದಿ

Vijayapura: ಪಿಸ್ತೂಲ್ ತೋರಿಸಿ ಚಿನ್ನದಂಗಡಿ ದೋಚಿದ ಆಗಂತುಕರು

Share It

ವಿಜಯಪುರ: ಚಿನ್ನದಂಗಡಿಗೆ ನುಗ್ಗಿ ಪಿಸ್ತೂಲ್ ತೋರಿಸಿ, ಕೋಟ್ಯಂತರ ಬೆಲೆ ಬಾಳುವ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಜಡಜಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿರುವ ಚಿನ್ನದ ಅಂಗಡಿಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಇಬ್ಬರು ಆಗಂತುಕರು ಬಂದಿದ್ದು, ಆ ವೇಳೆ ಅಂಗಡಿಯಲ್ಲಿದ್ದ ವೃದ್ಧೆಯನ್ನು ಬೆದರಿಸಿ ಆಚೆಗೆ ಕಳುಹಿಸಿದ್ದಾರೆ. ಅನಂತರ ಮಹಾರುದ್ರ ಕಂಚಗಾರ ಎಂಬುವವರ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಗಾಳಿಯಲ್ಲಿ 2 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಅನಂತರ ಚಿನ್ನ ದೋಚಿ ಮಹಾರಾಷ್ಟçದತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿವೈಎಸ್‌ಪಿ ಪರುಶರಾಮ ಮನಗುಳಿ ಭೇಟಿ ನೀಡಿದ್ದು, ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ್ದಾರೆ.

ಝಳಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಶೇಷ ತಂಡ ರಚನೆ ಮಾಡಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮಹಾರಾಷ್ಟç ಗಡಿಯಲ್ಲಿ ಕಟ್ಟೆಚ್ಚರ ವಹಿಸಿ, ಆರೋಪಿಗಳ ಸೆರೆಗೆ ಮುಂದಾಗಿದ್ದಾರೆ.


Share It

You cannot copy content of this page