ಬೆಂಗಳೂರು: ಅಪ್ರಾಪ್ತೆಯೊಬ್ಬಳ ಮದುವೆ ನಡೆಯುವ ಮಾಹಿತಿಯನ್ನು ಅಧಿಕಾರಿಗಳಿಗೆ ಕೊಟ್ಟರು ಎಂಬ ಕಾರಣಕ್ಕೆ ಆ ಗ್ರಾಮದ ಅಂಗನವಾಡಿ ಕಾರ್ಯಕರ್ತೆಗೆ ಊರಿನವರು ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.
ಅರೇಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ತೇಜಸ್ವಿನಿಯನ್ನು ಗ್ರಾಮಸ್ಥರು ಪಂಚಾಯಿತಿ ನಡೆಸಿ, ಆಕೆಯೊಂದಿಗೆ ಗ್ರಾಮಸ್ಥರು ಯಾರೂ ಮಾತನಾಡದಂತೆ ಬಹಿಷ್ಕಾರ ಹಾಕಿದ್ದಾರೆ. ಜತೆಗೆ ಆಕೆಗೆ ದಂಡವನ್ನು ವಿಧಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಕೆಲ ದಿನಗಳ ಹಿಂದೆ ನಡೆದಿದ್ದ ಅಪ್ರಾಪ್ತೆಯೊಬ್ಬಳ ಬಾಲ್ಯವಿವಾಹವನ್ನು ಅಧಿಕಾರಿಗಳು ನಿಲ್ಲಿಸಿದ್ದರು. ಈ ಮಾಹಿತಿಯನ್ನು ಂಗನವಾಡಿ ಕಾರ್ಯಕರ್ತೆಯೇ ಅಧಿಕಾರಿಗಳಿಗೆ ನೀಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿತ್ತು. ಹೀಗಾಗಿ, ಗ್ರಾಮಸ್ಥರೆಲ್ಲ ಒಟ್ಟಾಗಿ ಸೇರಿ ಪಂಚಾಯಿತಿ ನಡೆಸಿ ಆಕೆಯ ಮೇಲೆ ಬಹಿಷ್ಕಾರ ಹಾಕಿದ್ದಾರೆ ಎನ್ನಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯ ಜತೆಗೆ ಗ್ರಾಮದವರು ಮಾತನಾಡುವಂತಿಲ್ಲ, ಆಕೆಯ ಜಮೀನಿಗೆ ಯಾರೂ ಕೆಲಸಕ್ಕೆ ಹೋಗುವಂತಿಲ್ಲ ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿದ್ದು, ಇದೀಗ ಗ್ರಾಮಸ್ಥರ ನಡೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.