ಕ್ರೀಡೆ ಸುದ್ದಿ

ವಿನೇಶ್ ನೀವು ಚಾಂಪಿಯನ್ ಆಪ್ ಚಾಂಪಿಯನ್ಸ್ : ಅನರ್ಹತೆ ಬೆನ್ನಲ್ಲೇ ಮೋದಿ ಟ್ವೀಟ್

Share It

ನವದೆಹಲಿ : ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮಹಾ ಆಘಾತವಾಗಿದೆ. ಮಹಿಳೆಯರ ಕುಸ್ತಿ ವಿಭಾಗದ 50 ಕೆ.ಜಿ ಸ್ಪರ್ಧೆಯಲ್ಲಿ ಐತಿಹಾಸಿಕವಾಗಿ ಫೈನಲ್‌ಗೇರಿದ್ದ ವಿನೇಶ್‌ ಪೋಗಟ್‌, ಹೆಚ್ಚಿನ ತೂಕದ ಕಾರಣದಿಂದಾಗಿ ಫೈನಲ್‌ ಪಂದ್ಯದಿಂದ ಅನರ್ಹರಾಗಿದ್ದಾರೆ.

ಅವರೀಗ ಈ ಇವೆಂಟ್‌ನಲ್ಲಿ ಕೊನೆಯ ಸ್ಥಾನ ಪಡೆದ ರೆಸ್ಲರ್‌ ಆಗಲಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ನ ಹಠಾತ್‌ ನಿರ್ಧಾರದಿಂದ ಇಡೀ ಭಾರತಕ್ಕೆ ಅಘಾತವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ವಿನೇಶ್‌ ಪೋಗಟ್‌ ಅವರ ಬೆಂಬಲಕ್ಕೆ ನಿಂತಿದ್ದು, ಅವರಿಗೆ ಸ್ಪೂರ್ತಿದಾಯಕ ಮಾತುಗಳನ್ನು ಆಡಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿನೇಶ್‌ ಪೋಗಟ್‌ ತೋರಿದ ವಿರೋಧಿ ನಿರ್ಧಾರದ ಕಾರಣದಿಂದಾಗಿ ಹೆಚ್ಚಿನವರು ಫೈನಲ್‌ ಪಂದ್ಯವೇನಾದರೂ ವಿನೇಶ್‌ ಪೋಗಟ್‌ ಗೆದ್ದಲ್ಲಿ ಮೋದಿ ಆಕೆಗೆ ಕರೆ ಮಾಡಿ ಅಭಿನಂದಿಸುತ್ತಾರೆಯೇ? ಎಂದು ಪ್ರಶ್ನೆ ಮಾಡಿದ್ದರು. ಆದರೆ, ಆಕೆಯ ವೃತ್ತಿಜೀವನದಲ್ಲಿ ಎದುರಾದ ಅತ್ಯಂತ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಮೋದಿ ಟ್ವೀಟ್‌ ಮಾಡಿ ಆಕೆಗೆ ಸಂತೈಸಿದ್ದಾರೆ.

‘ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನನಗೆ ನೋವು ತಂದಿದೆ. ಇಲ್ಲಿನ ಪದಗಳು ನಾನು ಅನುಭವಿಸುತ್ತಿರುವ ಹತಾಶೆಯ ಅರ್ಥವನ್ನು ವ್ಯಕ್ತಪಡಿಸಬಹುದು ಎಂದು ನಾನು ಬಯಸುತ್ತೇನೆ.

ಅದೇ ಸಮಯದಲ್ಲಿ, ನೀವು ಅಚಲ ಮನೋಭಾವವನ್ನು ಸಾರುತ್ತೀರಿ ಎಂದು ನನಗೆ ತಿಳಿದಿದೆ. ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಇನ್ನಷ್ಟು ಸ್ಟ್ರಾಂಗ್‌ ಆಗಿ ಮರಳಿ. ನಾವೆಲ್ಲರೂ ನಿಮ್ಮ ಬೆಂಬಲಕ್ಕೆ ಅಚಲವಾಗಿ ನಿಂತಿದ್ದೇವೆ.’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.


Share It

You cannot copy content of this page