ಬೆಂಗಳೂರು: ಅಕ್ರಮ ಹಣ ಗರ್ವಾವಣೆ ಪ್ರಕರಣದಲ್ಲಿ ಬಂಧಿತರಾಗಿ ಜೈಲುಪಾಲಾಗಿರುವ ವೀರೇಂದ್ರ ಪಪ್ಪಿ ಜಾಮೀನು ಅರ್ಜಿಯ ಆದೇಶವನ್ನು ಡಿ.29ಕ್ಕೆ ಕಾಯ್ದಿರಿಸಲಾಗಿದೆ.
ಅಕ್ರಮ ಹಣ ವರ್ಗಾವಣೆಗೆಸಂಬಂಧಿಸಿದಂತೆ ಚಿತ್ರದುರ್ಗದ ಕಾಂಗ್ರೆಸ್ ಶಾಸಕರಾದ ವೀರೇಂದ್ರ ಪಪ್ಪಿ ಅವರನ್ನು ಆಗಸ್ಟ್ 23 ರಂದು ಇಡಿ ಅಧಿಕಾರಿಗಳು ಸಿಕ್ಕಿಂ ರಾಜಧಾನಿಯಲ್ಲಿ ಬಂಧಿಸಿದ್ದರು. ಅನಂತರ ಅವರನ್ನು ಸುದೀರ್ಘ ಕಾಲ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವೀರೇಂದ್ರ ಪಪ್ಪಿ ಜಾಮೀನು ನೀಡುವಂತೆ ಕೋರಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿಯ ಆದೇಶವನ್ನು ಡಿ.29ಕ್ಕೆ ಮುಂದೂಡಿದೆ.
Updating…

