ಈ ವರ್ಷದಲ್ಲೇ ಮಹಾನಗರ ಪಾಲಿಕೆ ಚುನಾವಣೆ ನಡೆಸ್ತೇವೆ:ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ
ಮೈಸೂರು: 5 ಮಹಾನಗರ ಪಾಲಿಕೆಗಳ ಮತದಾರರ ಪಟ್ಟಿ ಸಿದ್ಧವಾಗಿದ್ದು, ಸರಕಾರ ಮೀಸಲಾತಿ ಪಟ್ಟಿ ಕೊಡುತ್ತಿದ್ದಂತೆ ಚುನಾವಣೆ ನಡೆಸಲು ನಾವು ಸಿದ್ಧವಿದ್ದೇವೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, 5 ಮಹಾನಗರ ಪಾಲಿಕೆಗಳ ಚುನಾವಣೆಗೆ ನಾವು ಸಿದ್ಧರಿದ್ದೇವೆ. ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಮತದಾರರ ಪಟ್ಟಿ ಅಂತಿಮವಾಗಿದೆ. ಸರಕಾರ ಮೀಸಲಾತಿ ಪಟ್ಟಿ ಕೊಡಬೇಕಿದ್ದು, ಒಂದು ವೇಳೆ ಸರಕಾರ ಮೀಸಲಾತಿ ಪಟ್ಟಿ ಕೊಡದಿದ್ದರೂ ಚುನಾವಣೆ ನಡೆಸುತ್ತೇವೆ. ಹೈಕೋರ್ಟ್‌ಗೆ ಹೋಗಿ ಹಳೆಯ ಮೀಸಲಾತಿ ಪಟ್ಟಿಯಂತೆಯೇ ಚುನಾವಣೆ ನಡೆಸಬಹುದು ಎಂದರು.
ಮೈಸೂರು, ಮಂಗಳೂರು, ಶಿವಮೊಗ್ಗ, ತುಮಕೂರು ಸೇರಿ 5 ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಬೇಕಿದೆ. ಸರಕಾರ ಉದ್ದೇಶಪೂರ್ವಕವಾಗಿ ಮೀಸಲಾತಿ ಪಟ್ಟಿ ಕೊಡುತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸರಕಾರ ಬೇಕೆಂದೂ ಹೀಗೆ ಮಾಡುತ್ತಿದ್ದೆ ಎನಿಸುತ್ತಿಲ್ಲ. ಅನಗತ್ಯವಾಗಿ ವಿಳಂಬ ಮಾಡುತ್ತಿಲ್ಲ, ಸರಕಾರಕ್ಕೆ ತನ್ನದೇ ಆದ ಜವಾಬ್ದಾರಿಯಿದೆ. ಯಾವುದೇ ವರ್ಗಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಜತೆಗೆ ಸರಕಾರಕ್ಕೂ ಬೇರೆ ಬೇಎ ಕೆಲಸಗಳಿರುತ್ತವೆ. ಇದೆಲ್ಲ ನೋಡಿಕೊಂಡು ಚುನಾವಣೆ ನಡೆಸಬೇಕು ಎಂದು ತಿಳಿಸಿದರು.


