ಕಲಬುರಗಿ:
ದೇಶದಲ್ಲಿ ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲುತ್ತೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ 18ಲೋಕಸಭೆ ಸ್ಥಾನ ಗೆಲ್ಲುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು ಅಬ್ ಕಿ ಬಾರ್ 400 ಪಾರ್ ಅಂತ ಹೇಳ್ತಾ ಇದ್ರು, ಅದು ಜನರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. 400 ಪಾರ್ ಆದ್ರೆ ಸಂವಿಧಾನ ಬದಲಾವಣೆ ಮಾಡ್ತಾರೆ ಅಂತ ಅದಕ್ಕೆ ಅವರಿಗೆ ಅವಕಾಶ ಕೊಡೊದಿಲ್ಲ. ಈ ಬಾರಿ 230 ಬಿಜೆಪಿ ದಾಟಲ್ಲ. ನಮ್ಮಲಿ ಬಿಜೆಪಿ ಅವರಿಗೆ ಆತಂಕ ಯಾಕೆ ? ನಮ್ಮಲ್ಲಿ ಯಾವುದೇ ಆತಂಕ ಇಲ್ಲ. ಜನ ನಮಗೆ ಆಶೀರ್ವಾದ ಮಾಡ್ತಾರೆ, ಜನ ಏನ್ ತೀರ್ಪು ಕೊಟ್ಟರೂ ಎಲ್ಲರೂ ತಲೆ ಬಾಗಬೇಕು ಎಂದರು.
ಎಲ್ಲಾ ಕಡೆ NDA ಅಧಿಕಾರಕ್ಕೆ ಬರುತ್ತೆ ಎಂಬ ಎಕ್ಸಿಟ್ ಪೋಲ್ ಹೇಳಿರುವ ವಿಚಾರದ ಕುರಿತು ಮಾತನಾಡಿದ ಅವರು, ಎಕ್ಸಿಟ್ ಪೋಲ್ ಒಂದು ಮಾರ್ಗ ಸೂಚಿತರ ಜನ ನೋಡ್ತಾ ಇದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 100 ದಾಟಲ್ಲ ಅಂತ ಹೇಳ್ತಾ ಇದ್ರು. ಎಲ್ಲಾ ಸರ್ವೇ ಸಮ್ಮಿಶ್ರ ಸರ್ಕಾರ ಯಾರಿಗೂ ಬಹುಮತ ಬರಲ್ಲ ಅಂತ ಹೇಳಿದ್ರು. ಹಲವು ಜನ ಬಿಜೆಪಿ ನಾಯಕರು ಸೂಟ್ ಕೂಡ ಹೋಲಿಸಿದ್ರು. ಕಳೆದ ವಿಧಾನಸಭೆ ಚುನಾವಣೆ ಎಕ್ಸಿಟ್ ಪೊಲ್ ಉಲ್ಟಾ ಆಯ್ತು. ನಮಗೆ ಜನರ ಎಕ್ಸಿಟ್ ಪೋಲ್ ಮುಖ್ಯ, ಇನ್ನೇನು 48 ಗಂಟೆಯಲ್ಲಿ ಫಲಿತಾಂಶ ಬರುತ್ತೆ. ಈ ಎಕ್ಸಿಟ್ ಪೋಲ್ ಮತ್ತೇ ಜನರ ಎಕ್ಸಿಟ್ ಪೋಲ್ ನಲ್ಲಿ ಏನ್ ಬರುತ್ತೆ ಅದು ನೋಡೋಣ ಎಂದು ಹೇಳಿದರು.

