ಉಪಯುಕ್ತ ಸುದ್ದಿ

Weight issue: ಎಷ್ಟೇ ತಿಂದರು ದಪ್ಪ ಆಗುತ್ತಿಲ್ಲವೇ? ಕಾರಣ ಇಲ್ಲಿದೆ ನೋಡಿ!

Share It

ಸಾಮಾನ್ಯವಾಗಿ ಸಣ್ಣಗಿರುವವರು ಅನೇಕ ಬಾರಿ ಮುಜುಗರಕ್ಕೆ ಒಳಗಾಗುವುದುಂಟು. ಕೆಲವರಂತೂ ಹೆಚ್ಚು ಹೆಚ್ಚು ತಿಂದರು ದಪ್ಪ ಆಗುವುದೇ ಇಲ್ಲ. ಇನ್ನು ಕೆಲವರು ಮಿತ ಆಹಾರ ತಿನ್ನುತ್ತಿದ್ದರು ಬೇಗ ದಪ್ಪ ಆಗುತ್ತಾರೆ. ಕೆಲವರು ಏಕೆ ದಪ್ಪ ಆಗುವುದಿಲ್ಲ ಎಂಬುದನ್ನು ತಿಳಿಯೋಣ.

ದೇಹದ ತೂಕವನ್ನು ಹೆಚ್ಚಿಸುವುದು ಅಥವಾ ಅದನ್ನು ಸರಿಯಾದ ರೀತಿಯಲ್ಲಿ ನಿಯಂತ್ರಣ ಮಾಡುವುದು ಒಂದು ಮೂಲಭೂತ ಅಂಶವಾಗಿದೆ.

ದೇಹದ ತೂಕದ ನಿರ್ವಹಣೆಗೆ ಕೆಲವು ಟಿಪ್ಸ್ ಗಳನ್ನು ಅನುಸರಿಸಬೇಕು.

ನಿಮ್ಮ ನಿದ್ರಾ ಸಮಯವೂ 7 ಗಂಟೆಗಿಂತ ಕಡಿಮೆ ಇರಬಾರದು.

ನಾವು ದಿನ ನಿತ್ಯ ತಿನ್ನುವ ಆಹಾರಗಳು ನಮ್ಮ ದೇಹದ ತೂಕದ ಮೇಲೆ ಪರಿಣಾಮ ಬೀರುತ್ತವೆ .ನಾವು ಎಷ್ಟು ಆಹಾರ ತಿನ್ನುತ್ತೇವೆ ಎನ್ನುವುದಕ್ಕಿಂತ ಯಾವ ಪೋಷಕಾಂಶವುಳ್ಳ ಆಹಾರ ಸೇವಿಸುತ್ತೇವೆ ಎಂಬುದು ಮುಖ್ಯ. ನಮ್ಮ ದೇಹದ ನೂರನ್ ಜೀನ್ ಗಳು ದೇಹದ ತೂಕದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಣ್ಣ ಗಿರುವವರಿಗಿಂತ ಹೆಚ್ಚಿನ ಬೊಜ್ಜು ಇರುವವರು ಅನುವಂಶಿಕವಾಗಿ ಅಪಾಯದಲ್ಲಿ ಇರುತ್ತಾರೆ.

ಕೆಲ ಟಿಪ್ಸ್ ಗಳು ಹೀಗಿವೆ.

ಹಸಿವಾದಾಗ ಮಾತ್ರ ತಿನ್ನಬೇಕು. ತಮ್ಮ ಹಸಿವಿಗೆ ತಕ್ಕಂತೆ ಆಹಾರ ಸೇವಿಸಬೇಕು. ಹೆಚ್ಚು ಸೇವಿಸಿದರೆ ದಪ್ಪ ವಾಗುತ್ತೇವೆ.

ಹಾರ್ಮೋನ್ ಅಂಶಗಳು. ಗ್ರೆಲಿನ್ ಮತ್ತು ಲೆಪ್ಟಿನ್ ಇವುಗಳು ನಮ್ಮ ಹಸಿವನ್ನು ನಿಯಂತ್ರಿಸುತ್ತವೆ. ಒಂದು ಹಸಿವನ್ನು ಉತ್ತೇಜಿಸಿದ್ದರೆ ಮತ್ತೊಂದ್ದು ಹಸಿವನ್ನು ನಿಗ್ರಹಿಸುತ್ತದೆ.

ಸರಿಯಾದ ನಿದ್ರೆ. ನಿದ್ರಾಹೀನತೆಯು ನಿಮ್ಮ ತೂಕದ ಏರುಪೇರಿಗೆ ಕಾರಣವಾಗುತ್ತದೆ. ನಿದ್ದೆ ಗೆಡುವುದರಿದ ಗ್ರೆಲಿನ್ ಹೆಚ್ಚಾಗುತ್ತದೆ. ಹೆಚ್ಚು ನಿದ್ದೆ ಮಾಡುವುದರಿಂದ ದೇಹದ ತೂಕ ಕಡಿಮೆ ಮಾಡಬಹುದು.

ಆಹಾರ ಪದ್ಧತಿ. ನೀವು ಆಹಾರವನ್ನು ಹೇಗೆ ಸೇವಿಸುತ್ತಿರು ಎಂಬುದು ಸಹ ಮುಖ್ಯ. ನಿಧಾನವಾಗಿ ಹಾಗೂ ಹೆಚ್ಚು ಅಗೆದು ತಿನ್ನುತ್ತಿದ್ದರೆ ದೇಹದ ತೂಕ ಕಡಿಮೆಯಾಗುವ ಸಾಧ್ಯತೆ ಹೆಚ್ಚು.

(Disclaimer: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ನೀಡುತ್ತದೆ. ಅಂತರ್ಜಾಲದಲ್ಲಿ ದೊರೆತ ಮಾಹಿತಿಯನ್ನು ಅನುಸರಿಸಿ ಬರೆಯಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಜ್ಞ ಅಥವಾ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ. ಈ ಮಾಹಿತಿಯ ಹೊಣೆಯನ್ನು ವೈಟ್ ಪೇಪರ್ ಹೊರುವುದಿಲ್ಲ.)


Share It

You cannot copy content of this page