ಬೆಂಗಳೂರು: ಪಿಎಸ್‌ಐ ಪರುಶುರಾಮ್ ಸಾವಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿಐಡಿ ತನಿಖೆಯಲ್ಲಿ ಪರುಶುರಾಮ್ ಬಳಿಯಿದ್ದ 7.33 ಲಕ್ಷ ಹಣವನ್ನು ಸೀಜ್ ಮಾಡಲಾಗಿದೆ.
ಪರುಶುರಾಮ್ ಸಾವನ್ನಪ್ಪಿದ್ದ ಪೊಲೀಸ್ ವಸತಿಗೃಹದಲ್ಲಿ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳಿಗೆ ಅವರ ಬಳಿಯಿದ್ದ ಹಣ ಸಿಕ್ಕಿದೆ ಎಂಬ ಮಾಹಿತಿ ಇದೆ. ಹೀಗಾಗಿ, ಈ ಹಣ ಯಾವುದು ಎಂಬ ಅನುಮಾನ ಇದೀಗ ಕಾಡುತ್ತಿದೆ.
ಪರುಶುರಾಮ್ ಬಳಕೆ ಮಾಡುತ್ತಿದ್ದ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ ಪರುಶುರಾಮ್ ಕಾಲ್ ರೆಕಾರ್ಡ್ ಮಾಡಿರುವ ಸಂಗತಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಪರುಶುರಾಮ್ ಕ್ರೆöÊಂ ಬ್ರಾಂಚ್ ಪೋಸ್ಟಿಂಗ್‌ಗಾಗಿ ಹಣ ಹೊಂದಿಸುತ್ತಿದ್ದು, ಅದೇ ಹಣವನ್ನು ತಮ್ಮ ರೂಮಿನಲ್ಲಿಟ್ಟುಕೊಂಡಿದ್ದರು ಎನ್ನಲಾಗಿದೆ. ಜತೆಗೆ, ಶಾಸಕರ ಶಿಫಾರಸ್ಸು ಪತ್ರ ಕೂಡ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಶಾಸಕ ಚೆನ್ನಾರೆಡ್ಡಿ ಅವರ ಲೆಟರ್ ಹೆಡ್‌ನಲ್ಲಿ ಯಾದಗಿರಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಹುದ್ದೆಗೆ ಪೋಸ್ಟಿಂಗ್ ನೀಡುವಂತೆ ಶಿಫಾರಸು ಮಾಡಲಾಗಿತ್ತು. ಇದಕ್ಕಾಗಿ, 15 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಉಳಿದ ಹಣ ಹೊಂದಾಣಿಕೆ ಮಾಡಲು ಪರುಶುರಾಮ್ ಪರದಾಟ ನಡೆಸುತ್ತಿದ್ದರು ಎಂದು ಆಪ್ತರು ಆರೋಪಿಸಿದ್ದಾರೆ.