ಡೆಂಘಿ ರೋಗವು ನಮ್ಮ ರಾಷ್ಟ್ರದಲ್ಲಲ್ಲದೆ ಈಗ ಜಾಗತಿಕ ಮಟ್ಟದಲ್ಲೂ ಹಬ್ಬುತ್ತಿದೆ. ಇದೊಂದು ದೊಡ್ಡ ಸಮಸ್ಯೆಯಾಗಿದೆ.
ರಾಜ್ಯದಲ್ಲಿ ದಿನೇದಿನೆ ಡೆಂಘಿ ಪ್ರಕರಣಗಳು ಹೆಚ್ಚುತ್ತಿವೆ. ರೋಗ ನಿಯಂತ್ರಣಕ್ಕೆ ಸರಕಾರ ಏನೆಲ್ಲ ಕ್ರಮ ತೆಗೆದುಕೊಂಡರೂ, ರೋಗ ಹರಡವುದು ಮಾತ್ರ ಕಡಿಮೆಯಾಗುತ್ತಿಲ್ಲ.
ಡೆಂಘಿ ಜ್ವರದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಕೂಡ ಇತ್ತೀಚೆಗೆ ವರದಿಯಾಗುತ್ತಿವೆ. ಹೀಗಾಗಿ, ಈ ರೋಗದ ಲಕ್ಷಣಗಳು, ಚಿಕಿತ್ಸೆ ಮತ್ತು ಮಾರ್ಗೋಪಾಯಗಳನ್ನು ತಿಳದುಕೊಳ್ಳುವುದು ಅವಶ್ಯಕ.
ಈ ಕಾಯಿಲೆ ಈಡಿಸ್ ಈಜಿಫ್ಟಿ ಸೊಳ್ಳೆಗಳು ಕಚ್ಚುವುದರಿಂದ ಹರಡುತ್ತದೆ. ಮಳೆಗಾಲ ಶುರುವಾದರೆ ಸಾಕು ನಿಂತ ನೀರಿನಿಂದ, ಮನೆಗಳಲ್ಲಿ ನೀರು ಸಂಗ್ರಹಿಸುವ ತೊಟ್ಟಿಗಳಿಂದ ಹೆಚ್ಚಾಗಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ.
ಡೆಂಘಿ ರೋಗದ ಪ್ರಮುಖ ಲಕ್ಷಣಗಳನ್ನು ಈ ಕೆಳಗಿನಂತೆ ತಿಳಿಯೋಣ ಬನ್ನಿ.
ಡೆಂಘಿ ರೋಗಿಯಲ್ಲಿ ಕಾಣಿಸಿಕೊಳ್ಳುವ ಮೊದಲ ಲಕ್ಷಣವೆಂದರೆ ಅತಿಯಾದ ಜ್ವರ. ಈ ಜ್ವರ ಒಮ್ಮೊಮ್ಮೆ 104 ಡಿಗ್ರಿಯವರೆಗೂ ಇರುತ್ತದೆ.
ಸ್ನಾಯುಗಳಲ್ಲಿ ಗಂಟು ಕಟ್ಟುವುದರ ಜೊತೆಗೆ ನೋವು ಬರುತ್ತದೆ.
ಅತಿಯಾದ ತಲೆನೋವು ಕಾಣಿಸಿಕೊಳ್ಳುತ್ತದೆ.
ವಾಕರಿಕೆ
ಅತಿಯಾದ ವಾಂತಿ
ಅತಿಯಾದ ಸುಸ್ತು ಒತ್ತಡ
ಇದಿಷ್ಟು ಡೆಂಘಿ ರೋಗದ ವ್ಯಕ್ತಿಯಲ್ಲಿ ಪ್ರಮುಖವಾಗಿ ಕಂಡುಬರುತ್ತವೆ. ಇಂತಹ ರೋಗ ಲಕ್ಷಣಗಳು ನಿಮ್ಮಲ್ಲಿಯೂ ಕಂಡುಬಂದರೆ ನೀವು ತಕ್ಷಣ ವೈದ್ಯರನ್ನು ಭೇಟಿಯಾಗುವುದು ಸೂಕ್ತ.
ಡೆಂಘಿ ಜ್ವರ ಹೆಚ್ಚಾಗಲು ಮಳೆಯ ನೀರು ಸಂಗ್ರಹವಾಗುವುದು, ಅದರಲ್ಲಿ ಸೊಳ್ಳೆಗಳ ಉತ್ಪತಿ ಮುಖ್ಯ ಕಾರಣ. ಸೊಳ್ಳೆಗಳಿಂದ ರಕ್ಷಣೆ ಪಡೆಯುವುದು, ಮತ್ತು ಸಣ್ಣ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುವುದು ಅವಶ್ಯಕ.
- ಡಾ.ಅನ್ಸರ್ ಅಹಮದ್, ತಜ್ಞ ವೈದ್ಯರು