ಅಪರಾಧ ಸಿನಿಮಾ ಸುದ್ದಿ

ದರ್ಶನ್ ಇರುವ ಜೈಲು ಹೇಗಿದೆ? ಇಲ್ಲಿದೆ ಮಾಹಿತಿ

Share It

ಬೆಂಗಳೂರು: ಸುಮಾರು 22 ವರ್ಷಗಳ ಕಾಲ ಜೈಲಿನಲ್ಲಿದ್ದ ತುರುವನೂರು ಸಿದ್ಧಾರೂಢರವರು ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರದ ಇತ್ತೀಚಿಗೆ ಬಿಡುಗಡೆಯಾಗಿದ್ದಾರೆ. ಈ ಸಮಯದಲ್ಲಿ ನಟ ದರ್ಶನ್‌ರನ್ನು ಜೈಲಿನಲ್ಲಿ ಭೇಟಿ ಮಾಡಿರುವ ಪ್ರಸಂಗವನ್ನು ವಿವರಿಸಿದ್ದಾರೆ.

‘ದರ್ಶನ್ ಇರುವುದು ವಿಐಪಿ ಸೆಲ್‌ನಲ್ಲಿ. ಬೇರೆಯವರಿಗಿಂತ ಅವರ ಚೆನ್ನಾಗಿ ಚೆನ್ನಾಗಿರುತ್ತದೆ. ಅಲ್ಲಿ ಒಂದು ಹಾಸಿಗೆ, ಒಂದೆರಡು ಚೇರ್, ಒಂದು ಟಿವಿ, ಒಂದು ನೀರಿನ ಕ್ಯಾನ್ ಮತ್ತು ಸೊಳ್ಳೆ ಪರದೆ ಇರುತ್ತದೆ. ಅವರಿಗೆ ಬೆಡ್‌ಶೀಟ್‌ ಕೂಡ ಕೊಟ್ಟಿರುತ್ತಾರೆ. ಸೆಲ್‌ ಮುಂದೆ ಸಾಕಷ್ಟು ಜಾಗ ಇರುವ ಕಾರಣ ಅಲ್ಲೇ ಓಡಾಡಬಹುದು ಆದರೆ ಅವರೊಟ್ಟಿಗೆ ಯಾರೂ ಇರುವುದಿಲ್ಲ.

ಯಾರನ್ನಾದರೂ ಭೇಟಿ ಮಾಡಲು ನಡೆದುಕೊಂಡು ಬರುವಾಗ ಅಲ್ಲಿದ್ದ ಕೈದಿಗಳು ಸೆಲ್‌ನಿಂದ ನಿಂತು ನೋಡುತ್ತಾರೆ. ಪ್ರಜ್ವಲ್‌ ರೇವಣ್ಣ ದರ್ಶನ್‌ ಅವರನ್ನು ಭೇಟಿ ಮಾಡಲು ಸಾಧ್ಯವೇ ಇಲ್ಲ ಏಕೆಂದರೆ ಇಬ್ಬರ ರೂಮಿಗೆ ಸುಮಾರು 1 ಕಿಮೀ. ದೂರವಿರುತ್ತದೆ. ಎಲ್ಲರಿಗೂ ಸಿಗುವಂತೆ ಅವರಿಗೂ ಊಟ ಸಿಗುತ್ತದೆ ಆದರೆ ಅವರಿಗೆ ರೂಮಿಗೆ ಊಟ ಬರುತ್ತದೆ. ನಾನು ನೋಡಿದಾಗ ದರ್ಶನ್ ವಿಗ್ ಧರಿಸಿದ್ದರು.

ಎಲ್ಲರಿಗೂ ದರ್ಶನ್‌ರನ್ನು ಭೇಟಿ ಮಾಡಲು ಅವಕಾಶ ಸಿಗುವುದು ಕಡಿಮೆ. ನಾನು ದರ್ಶನ್‌ ಅವರ ಅಭಿಮಾನಿ ಹೊರಗಡೆ ಭೇಟಿ ಮಾಡುವುದು ತುಂಬಾನೇ ಕಷ್ಟ ಅವಕಾಶ ಮಾಡಿ ಕೊಡಿ ಎಂದು ಅಧಿಕಾರಿಗಳನ್ನು ಮನವಿ ಮಾಡಿದ್ದಕ್ಕೆ ಅಲ್ಲದೆ ನಾನು ಸನ್ನಡತೆ ಪಟ್ಟಿಯಲ್ಲಿ ಇದ್ದ ಕಾರಣ ಅನುಮತಿ ಕೊಟ್ಟರು. ಭೇಟಿ ಮಾಡಿ 10 ನಿಮಿಷ ಧ್ಯಾನ ಮಾಡಿಸಿದ್ದೆ. ನಿನ್ನ ಅಭಿಮಾನಿ ಬಂದಿದ್ದಾರೆ ನೋಡಿ ಎಂದು ದರ್ಶನ್‌ಗೆ ಅಧಿಕಾರಿಗಳು ಹೇಳಿದಾಗ ಕಳುಹಿಸಿ ಎಂದು ಹೇಳುತ್ತಾರೆ.

ಆಗ ಹ್ಯಾಂಡ್‌ಶೇಕ್ ಮಾಡಿ ತಬ್ಬಿಕೊಳ್ಳುತ್ತಾರೆ ಆಗ ನನಗೆ ತುಂಬಾ ಖುಷಿಯಾಗುತ್ತದೆ. ರೂಮ್‌ ಒಳಗೆ ಕರೆದುಕೊಂಡು ಹೋಗಿ ಅವರಿಗೆ ಬಿಸ್ಕೆಟ್ ಕೊಡ್ತಾರೆ ಆಮೇಲೆ ತುಂಬಾ ಕ್ಲೋಸ್ ಆಗಿ ಮಾತನಾಡಿ ನನ್ನ ಕೇಸ್‌ ಬಗ್ಗೆ ವಿಚಾರಿಸುತ್ತಾರೆ. ಸರ್ 10 ನಿಮಿಷ ಧ್ಯಾನ ಮಾಡೋಣ ಎಂದು ಕೇಳಿಕೊಂಡಾಗ ಮಾಡುತ್ತಾರೆ. ನನ್ನೊಟ್ಟಿಗೆ ಆತ್ಮೀಯತಿಯಿಂದ ಮಾತನಾಡಿದ್ದರು ಅವರ ದೇಹ ತುಂಬಾ ಇಳಿದಿದೆ.

ಬೇರೆ ಕೈದಿಗಳ ಜೊತೆ ಜಗಳ ಮಾಡಲು ಅವಕಾಶ ಸಿಗುವುದಿಲ್ಲ ಆದರೆ ಫ್ಯಾಮಿಲಿಯನ್ನು ಭೇಟಿ ಮಾಡಲು ದಿನ ಅವಕಾಶ ಸಿಗುತ್ತದೆ. ಆ ಸ್ಥಿತಿಯಲ್ಲಿ ದರ್ಶನ್‌ರನ್ನು ನೋಡಿ ಬೇಸರ ಆಯ್ತು ಎಂದು ತುರುವನೂರು ಸಿದ್ಧಾರೂಢ ಹೇಳಿದ್ದಾರೆ. ‌


Share It

You cannot copy content of this page