ರಾಜಕೀಯ ಸುದ್ದಿ

ಮುಂದಿನ ಸಿಎಂ ಬಗ್ಗೆ ಕೋಡಿ ಮಠದ ಶ್ರೀಗಳಿಂದ ಭವಿಷ್ಯ

Share It

ವಿಜಯಪುರ: ಉತ್ತರ ಕರ್ನಾಟಕ ಭಾಗದಿಂದ ಎಂ.ಬಿ ಪಾಟೀಲ್ ಮುಖ್ಯಮಂತ್ರಿ ಆಗಲಿ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಶುಭ ಹಾರೈಸಿದ್ದಾರೆ.

ವಿಜಯಪುರ‌ ಜಿಲ್ಲೆ ಆಲಮೇಲ ತಾಲೂಕಿನ ಕಡನಿ ಗ್ರಾಮದಲ್ಲಿ ಭಾನುವಾರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೋಡಿ ಮಠದ ಶ್ರೀಗಳು, ಮೊನ್ನೆ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುತ್ತಿದ್ದೆ. ಈ ವೇಳೆ ಉತ್ತರ ಕರ್ನಾಟಕದಿಂದ ಯಾರಾದರೂ ಸಿಎಂ ಆಗಬಹುದು ಎಂದರೆ, ಸಚಿವ ಎಂ.ಬಿ ಪಾಟೀಲ್ ಆಗಲಿ ಎಂದಿದ್ದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲದೆ, ಎಂ.ಬಿ ಪಾಟೀಲ್ ಅವರನ್ನು ಹಾಡಿಹೊಗಳಿದರು.

ಪ್ರಾಕೃತಿಕ ವಿಕೋಪಗಳ ಬಗ್ಗೆಯೂ ಸ್ವಾಮೀಜಿ ಮುನ್ಸೂಚನೆ ನೀಡಿದ್ದಾರೆ.


Share It

You cannot copy content of this page