ಕ್ರೀಡೆ ಸುದ್ದಿ

ರೋಹಿತ್ ಕೊಹ್ಲಿ ನಂತರ ಟೀಮ್ ಇಂಡಿಯಾದ ಉತ್ತರಾಧಿಕಾರಿ ಯಾರು..?

Share It

ಟಿ 20 ವಿಶ್ವ ಕಪ್ ಗೆದ್ದು ಸಂಭ್ರಮಿಸುತ್ತಿದ್ದ ಬೆನ್ನಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಟಿ 20ಯ ಮಾದರಿಯ ಆವೃತ್ತಿಗೆ ವಿದಾಯ ಹೇಳಿದ್ದಾರೆ. ತಂಡ ಕಷ್ಟದ ಸಮಯದಲ್ಲಿದ್ದಾಗ ಸದಾ ಆಪ್ತರಕ್ಷಕನಂತೆ ಕಾಪಾಡುತ್ತಿದ್ದ ವಿರಾಟ್ ಕೊಹ್ಲಿ, ತಂಡವನ್ನು ಸದಾ ಮುನ್ನೆಡೆಸುತ್ತಿದ್ದ ನಾಯಕ ರೋಹಿತ್ ಶರ್ಮರ ವಿದಾಯ ಬಿಸಿಸಿಐಗೆ ತಲೆನೋವಾಗಿ ಪರಿಣಾಮಿಸಿದೆ.

ಟಿ 20 ಮಾದರಿಯಲ್ಲಿ ಇವರ ಸ್ಥಾನವನ್ನು ಇನ್ನುಮುಂದೆ ಯಾರು ತುಂಬುತ್ತಾರೆ, ರೋಹಿತ್ ನ ಉತ್ತರಾಧಿಕಾರಿ ಯಾರು ಎಂಬುದು ದೊಡ್ಡ ಸವಲಾಗಿದೆ. ಇದರಿಂದ ಬಿಸಿಸಿಐ ಯುವ ಆಟಗಾರರುಳ್ಳ ಹೊಸ ತಂಡವನ್ನೇ ಕಟ್ಟಬೇಕಾಗಿದೆ.

ಇತ್ತೀಚಿನ ಬಿಸಿಸಿಐನ ನಿಯಮದ ಪ್ರಕಾರ ವೈಟ್ ಬಾಲ್ ಮತ್ತು ರೆಡ್ ಬಾಲ್ ಎರಡೂ ಫಾರ್ಮೆಟ್ ಗಳಲ್ಲೂ ಬೇರೆ ಬೇರೆ ನಾಯಕರು ಇರಬೇಕು ಎಂದು ವಿರಾಟ್ ಕೊಹ್ಲಿಯವರನ್ನು ಸಹಾ ಏಕದಿನ ನಾಯಕತ್ವದಿಂದ ಬಲವಂತವಾಗಿ ಕೆಳಗಿಳಿಸಿದ್ದು ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆದ್ದರಿಂದ ಟಿ 20 ಯ ಜೊತೆಗೆ ಏಕದಿನದ ಆವೃತ್ತಿಗೂ ನಾಯಕನನ್ನೂ ನೇಮಕ ಮಾಡಬೇಕಾಗಿದೆ.

ವೈಟ್ ಬಾಲ್ ಫಾರ್ಮೆಟ್ ಗೆ ನಾಯಕನಾಗಿ ಮಾಡಲು ಬಿಸಿಸಿಐನ ಮುಂದಿರುವ ಮೊದಲ ಆಯ್ಕೆ ಹಾರ್ದಿಕ್ ಪಾಂಡ್ಯ, ಇವರು ಏಕದಿನಕ್ಕೆ ಅಷ್ಟು ಸರಿ ಹೊಂದುವುದಿಲ್ಲ ಎಂಬ ಟೀಕೆಗಳು ಕೇಳಿಬರುತ್ತೀವೆ. ಇನ್ನು ಎರಡನೇ ಆಯ್ಕೆ ಎಂದರೆ ಶುಭ್ಮನ್ ಗಿಲ್ ಕೊಹ್ಲಿ, ರೋಹಿತ್ ಬಳಿಕ ಮೂರು ಆವೃತ್ತಿಯಲ್ಲೂ ಆಡುತ್ತಿರುವ ಆಟಗಾರ, ಆದರೆ ಇವರು ಸದ್ಯಕ್ಕೆ ಫಾರ್ಮ ನಲ್ಲಿ ಇಲ್ಲದಿರುವುದೇ ದೊಡ್ಡ ಚಿಂತೆಯಾಗಿದೆ. ಇವರಿಬ್ಬರಲ್ಲಿ ನಾಯಕನ ಪಟ್ಟ ಯಾರಿಗೆ ಸಿಗುತ್ತೆ ಕಾದು ನೋಡಬೇಕಾಗಿದೆ.


Share It

You cannot copy content of this page