ನೇಹಾನ ಕೊಲೆ ಮಾಡಿದ್ದೇಕೆ? ಪೊಲೀಸರ ಮುಂದೆ ಬಾಯ್ಬಿಟ್ಟ ಫಯಾಜ್

IMG-20240419-WA0021
Share It

ಹುಬ್ಬಳ್ಳಿ : ಕಳೆದ ಗುರುವಾರ (ಏಪ್ರಿಲ್ 18) ರಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಬಿವಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಗೈದಿದ್ದ ಹಂತಕ ಫಯಾಜ್​ನನ್ನು ಪೊಲೀಸರು ಬಂಧಿಸಿ, ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದಾರೆ. ಕಾರಾಗೃಹದಲ್ಲಿ ಆರೋಪಿ ಫಯಾಜ್ ಪೊಲೀಸ್ ಸಿಬ್ಬಂದಿ ಎದುರು ಕೊಲೆ ಕಾರಣವನ್ನು ಬಾಯಿಟ್ಟಿರುವ ಮಾಹಿತಿ ಲಭ್ಯವಾಗಿದೆ.

“ಅವಳು (ನೇಹಾ) ನನ್ನ ಜೊತೆ ಮಾತನಾಡಲ್ಲ ಅಂದಳು, ಅದಕ್ಕೆ ನಾನು ಚಾಕು ಹಾಕಿದೆ” ಎಂದು ಫಯಾಜ್​ ಕಾರಾಗೃಹ ಸಿಬ್ಬಂದಿ ಎದುರು ಹೇಳಿದ್ದಾನೆ. ಅಲ್ಲದೆ ಅವತ್ತು ಏನೆಲ್ಲ ಘಟನೆ ನಡೆಯಿತು ಎಂಬುವುದನ್ನು ವಿವರಿಸಿದ್ದಾನೆ.

ಘಟನೆ ನಡೆಯುವುದಕ್ಕೂ ಮುಂಚೆಯೇ ಕಾಲೇಜು ಬಿಟ್ಟಿದ್ದೆ. ಒಂದು ವಾರದ ಹಿಂದೆ ಕಾಲೇಜ್​ಗೆ ಹೋಗಿ ನೇಹಾಳನ್ನು ಮಾತನಾಡಿಸಲು ಯತ್ನಿಸಿದೆ. ಆದರೆ ಅವಳು (ನೇಹಾ) ನಿನ್ನ ಜೊತೆ ಮಾತನಾಡಲು ಇಷ್ಟ ಇಲ್ಲ ಅಂತ ಅವೈಡ್ ಮಾಡಿ, ಹೊರಟು ಹೋದಳು”.

“ಏಪ್ರಿಲ್​ 18 ರಂದು ಅವಳು ಪರೀಕ್ಷೆ ಬರೆಯಲು ಬಿವಿಬಿ ಕಾಲೇಜಿಗೆ ಬಂದಿದ್ದಳು. ನಾನು (ಫಯಾಜ್​) ಮತ್ತೆ ಅಂದು ಕಾಲೇಜಿಗೆ ಹೋದೆ. ಪರೀಕ್ಷೆ ಮುಗಿಯುವವರೆಗೂ ಕಾಯ್ದೆ. ಪರೀಕ್ಷೆ ಮುಗಿದ ಬಳಿಕ ಹೊರಗೆ ಬಂದ ಅವಳನ್ನು ಮಾತನಾಡಿಸಲು ಯತ್ನಿಸಿದೆ. ಆದರೆ ಅವಳು ಮಾತಾಡಲ್ಲ ಅಂದಳು. ಹೀಗಾಗಿ ಅವಳಿಗೆ ಚಾಕುವಿನಿಂದ 10 ಬಾರಿ ಚುಚ್ಚಿದೆ. ಅವಳಿಗೆ ಚಾಕು ಹಾಕುವ ವೇಳೆ ನನ್ನ ಎರಡು ಕೈ ಬೆರಳುಗಳಿಗೆ, ಕಾಲಿಗೂ ಗಾಯವಾಗಿದೆ. ಏನಾಗಿದೆ ಅನ್ನೋದು ಗೊತ್ತಿಲ್ಲ, ಅವಳು ಮಾತಾಡಲ್ಲ ಅಂದಳು, ಅದಕ್ಕೆ ನಾನು ಚಾಕು ಹಾಕಿದ್ದೇನೆ” ಎಂದು ಕಾರಾಗೃಹ ಸಿಬ್ಬಂದಿ ಎದುರು ಫಯಾಜ್​ ಹೇಳಿದ್ದಾನೆ.

ಇದೇ ವೇಳೆ ಮೃತ ನೇಹಾ ಹಿರೇಮಠ ಅವರ ಮನೆಯ ಮುಂಭಾಗದಲ್ಲಿರುವ ಮುಸ್ಲಿಂ ಕುಟುಂಬದವರು ಪ್ರತಿಕ್ರಿಯಿಸಿ “ಲವ್ ಆ ತರಹ ಏನೂ ಇರಲಿಲ್ಲ, ಅವಳು ಒಳ್ಳೆ ಹುಡುಗಿ, ಹಿಂದೂ-ಮುಸ್ಲಿಂ, ಬೇಧ-ಭಾವ ಇಲ್ಲದೆ ನಾವಿದ್ದೇವೆ. ನೇಹಾ ತಾಯಿ ನಮ್ಮ ಜೊತೆ ವಾಕಿಂಗ್ ಬರುತ್ತಾ ಇದ್ದರು. ನೇಹಾ ನಮ್ಮ ಜೊತೆ ಬಹಳ ಚೆನ್ನಾಗಿ‌ ಮಾತಾಡುತ್ತಿದ್ದರು. ಅವರ ಮನೆಯಲ್ಲಿ ಹಬ್ಬ ಇದ್ದರೆ ನಾವು ಹೋಗತಿದ್ವಿ. ನಮ್ಮ ಮನೆಯಲ್ಲಿ ಹಬ್ಬ ಇದ್ದರೆ ಅವರು ಬರುತ್ತಿದ್ದರು. ಎಲ್ಲರೊಂದಿಗೆ ನೇಹಾ ಚೆನ್ನಾಗಿದ್ದಳು, ನೇಹಾ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದರು.


Share It

You cannot copy content of this page