ಅಪರಾಧ ಸಿನಿಮಾ ಸುದ್ದಿ

ಪೊಲೀಸರು “ಡಿ’ ಗ್ಯಾಂಗ್ ಬೇರೆಬೇರೆ ಜೈಲಿನಲ್ಲಿಡಬೇಕು ಎಂದು ಹೇಳಿದ್ದೇಕೆ?

Share It

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದೆ. ಆದರೆ, ಪೊಲೀಸರು, ಆರೋಫಿಗಳನ್ನು ಬೇರೆ ಬೇರೆ ಜೈಲಿನಲ್ಲಿಡಲು ನ್ಯಾಯಾಲಯದ ಅನುಮತಿ ಕೇಳಿದ್ದಾರೆ

ಒಂದೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬೇರೆ ಬೇರೆ ಜೈಲಿನಲ್ಲಿಡಲು ಪೊಲೀಸರು ಅನುಮತಿ ಕೇಳಿದ್ಯಾಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅದಕ್ಕೆ ಉತ್ತರ ಹುಡುಕುತ್ತಾ ಹೋದರೆ, ಡಿ ಗ್ಯಾಂಗ್ ಕ್ರೌರ್ಯ ಬೆಚ್ಚಿಬೀಳಿಸುತ್ತದೆ.

ರೇಣುಕಾ ಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದಲ್ಲಿಂದ ಡಿ ಗ್ಯಾಂಗ್ ತನ್ನ ಕ್ರೌರ್ಯದ ಪ್ರದರ್ಶನ ಮಾಡುತ್ತಲೇ ಬಂದಿದೆ. ಈ ನಡುವೆ ಕೆಲವು ಅಮಾಯಕರು, ಅಭಿಮಾನಿಗಳನ್ನು ಕೃತ್ಯಕ್ಕೆ ಬಳಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ರೇಣುಕಾ ಸ್ವಾಮಿಯನ್ನು ಕಿಡ್ನಾಪ್ ಮಾಡುವಂತೆ ಚಿತ್ರದುರ್ಗದ ಅಭಿಮಾನಿ ಸಂಘದ ಅಧ್ಯಕ್ಷನಿಗೆ ಆರ್ಡರ್ ಮಾಡಲಾಗಿತ್ತು. ಆತನನ್ನು ಬಿಟ್ಟರೆ, ಚಿತ್ರದುರ್ಗದಿಂದ ಬಂದ ಅನುಕುಮಾರ್, ಡ್ರೈವರ್ ರವಿಗೆ ಆತನ ಕಿಡ್ನಾಪ್ ಮತ್ತು ಕೊಲೆಯ ಲವಲೇಶವೂ ಗೊತ್ತಿರಲಿಲ್ಲ. ಆದರೆ, ಅವರ ಪಾತ್ರದ ಬಗ್ಗೆ ನ್ಯಾಯಾಲಯದಲ್ಲಿ ತಿಳಿಯಬೇಕಿದೆ.

ಈ ಆರೋಪಿಗಳು ಕೊಲೆ ಆರೋಪ ಹೊತ್ತುಕೊಳ್ಳದೆ ವಾಪಸ್ ಊರಿಗೆ ಹೋಗಿದ್ದು, ಪೊಲೀಸರ ಮುಂದೆ ನಂತರ ಶರಣಾದರು. ತಾವು ಕಂಡಿದ್ದನ್ನು ತಿಳಿಸಿದ್ದರು. ಇದೀಗ ಜೈಲಿನಲ್ಲಿಯೇ ಎಲ್ಲರೂ ಒಟ್ಟಿಗೆ ಇದ್ದಾರೆ. ಹೀಗಾಗಿ, ಅವರ ಮೇಲೆ ಕೊಲೆ ಮಾಡಿದ ಆರೋಪಿಗಳು, ಅಂದರೆ ದರ್ಶನ್ ಆಪ್ತರು ಹಲ್ಲೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ, ಬೇರೆ ಜೈಲಿಗೆ ಕಳುಹಿಸಲು ಪೊಲೀಸರು ಸಜ್ಜಾಗಿದ್ದಾರೆ.

ಸೆರೆಂಡರ್ ಆಗಿದ್ದವರಿಗೂ ಭಯ : ಇನ್ನು ಕೊಲೆ ಪ್ರಕರಣ ಮುಚ್ಚಿ ಹಾಕಲು ಪ್ಲಾನ್ ಮಾಡಿದ್ದ ಡಿ ಗ್ಯಾಂಗ್ ಅದಕ್ಕಾಗಿ ನಾಲ್ಕು ಜನರನ್ನು ಸೆರೆಂಡರ್ ಮಾಡಿಸಿತ್ತು. ಅವರಿಗೆ ಕೊಲೆಯಾದ ಯಾವುದೇ ಮಾಹಿತಿ ಇರಲಿಲ್ಲ. ಹಣದಾಸೆಗೆ ಅವರು ಪೊಲೀಸರ ಮುಂದೆ ಶರಣಾಗಿದ್ದರು.

ಪೊಲೀಸ್ ವಿಚಾರಣೆ ವೇಳೆ ತಡಬಡಾಯಿಸಿ, ಮುಂದಿನ ಎಲ್ಲ ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ. ಅವರ ಯಡವಟ್ಟಿನಿಂದಲೇ ಡಿ ಬಾಸ್ ಹೆಸರು ಕೊಲೆ ಪ್ರಕರಣದಲ್ಲಿ ಬಂತು ಎಂಬ ಸಿಟ್ಟು, ದರ್ಶನ್ ಸಹಚರರಿಗಿದೆ. ಹೀಗಾಗಿ, ಅವರ ವಿರುದ್ಧವೂ ದರ್ಶನ್ ಆಪ್ತರೆನಿಕೊಂಡ ನಾಲ್ವರು ಕಿಡಿಕಾರುತ್ತಿದ್ದಾರೆ. ಹೀಗಾಗಿ, ಅವರ ಮೇಲೆಯೂ ಹಲ್ಲೆಯಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ಬೇರೆ ಜೈಲಿಗೆ ವರ್ಗಾವಣೆ ಕೋರಿದ್ದಾರೆ.


Share It

You cannot copy content of this page