ಗ್ರೈಂಡರ್ ನಲ್ಲಿ ಗಂಡನ ದೇಹ ತುಂಡರಿಸಿದ್ದ ಪತ್ನಿ: ಪ್ರಿಯಕರನ ಜತೆ ಸೇರಿ ನಡೆಸಿದ್ದ ಮರ್ಡರ್ ಮಿಸ್ಟರಿ ಬೇಧಿಸಿದ ಪೊಲೀಸರು
ಸಂಭಾಲ್, ಉತ್ತರಪ್ರದೇಶ:ಗಂಡನ ಮೃತದೇಹವನ್ನು ಗ್ರೈಂಡರ್ ನಲ್ಲಿ ರುಬ್ಬಿ, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಬಿಸಾಡಿದ್ದ ಪತ್ನಿಯ ಕೃತ್ಯವನ್ನು ಉತ್ತರ ಪ್ರದೇಶ ಪೊಲೀಸರು ಬೇಧಿಸಿದ್ದು, ಪತ್ನಿ ಸೇರಿ ಮೂವರನ್ನು ಬಂಧಿಸಿದ್ದಾರೆ.
ಚಂದೌಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಏಳು ದಿನಗಳ ಹಿಂದೆ ಮಾನವ ಅಂಗಾಗಳಿರುವ ಪಾಲಿಥಿನ್ ಚೀಲ ಪತ್ತೆಯಾಗಿತ್ತು. ಆ ಚೀಲದ ನಿಗೂಢತೆ ಬೆನ್ನುಹತ್ತಿದ ಪೊಲೀಸರು ಪತ್ನಿ ಮತ್ತು ಆಕೆಯ ಪ್ರೇಮಿ ಕೊಲೆ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ.
ಡಿ.15 ರಂದು ಪತ್ರೋವಾ ರಸ್ತೆಯ ಈದ್ಗಾದ ಹೊರಗೆ ಪಾಲಿಥಿನ್ ಚೀಲದಲ್ಲಿ ಮಾನವ ಅಂಗಗಳು ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಚೀಲದಲ್ಲಿ ಕತ್ತರಿಸಿದ ಕೈಕಾಲು ಮತ್ತು ಮಾಂಸದ ತುಂಡು ಕಂಡುಬAದಿದ್ದವು. ಕೈಯಲ್ಲಿ ರಾಹುಲ್ ಎಂಬ ಹಚ್ಚೆ ಹಾಕಲಾಗಿತ್ತು. ಇದರ ಆಧಾರದ ಮೇಲೆ, ದೇಹ ಗುರುತಿಸಲು ಪ್ರಯತ್ನ ನಡೆದಿದ್ದವು. ಆದರೆ, ಈ ಬಗ್ಗೆ ನಡೆದ ಎಲ್ಲ ಪ್ರಯತ್ನ ವಿಫಲವಾಗಿದ್ದವು. ಏತನ್ಮಧ್ಯೆ, ಚುನ್ನಿ ನಿವಾಸಿ ರಾಹುಲ್ ನಾಪತ್ತೆ ಬೆಳಕಿಗೆ ಬಂದಿತ್ತು. ಇದರ ಆಧಾರದ ಮೇಲೆ ನಡೆಸಲಾದ ತನಿಖೆಯಲ್ಲಿ ಕೊಲೆ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ರಾಹುಲ್ ಪತ್ನಿ ರೂಬಿ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು, ಇದರ ಆಧಾರದ ಮೇಲೆ, ಹಲವಾರು ಸುತ್ತಿನ ವಿಚಾರಣೆ ನಡೆಸಿದರು. ಈ ವೇಳೆ ಅವರು ನೀಡಿದ ಹೇಳಿಕೆಗಳು ಭಯಾನಕ ಕಥೆ ಬಹಿರಂಗಪಡಿಸಿದವು. ಇವರ ಹೇಳಿಕೆ ಆಧರಿಸಿ ಇತರ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಯಿತು.
ಘಟನೆ ನಡೆದ ರಾತ್ರಿ ರಾಹುಲ್ ತನ್ನ ಪತ್ನಿ ರೂಬಿಯನ್ನು ಆಕೆಯ ಪ್ರಿಯಕರ ಗೌರವ್ ಜೊತೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದ. ಬಳಿಕ ಮನೆಯಲ್ಲಿ ತೀವ್ರ ವಾಗ್ವಾದ ನಡೆದಿತ್ತು. ಬೆಳಗ್ಗೆ ತನ್ನ ಕುಟುಂಬಕ್ಕೆ ವಿಷಯ ಬಹಿರಂಗಪಡಿಸುವುದಾಗಿ ರಾಹುಲ್ ಬೆದರಿಕೆ ಹಾಕಿದ್ದ. ಇದಾದ ಬಳಿಕ ಹೆಂಡತಿ ತನ್ನ ಪ್ರಿಯಕರನ ಜತೆ ಸೇರಿ ರಾಹುಲ್ ಕೊಲೆಗೆ ಸಂಚು ರೂಪಿಸಿದ್ದಳು.
ಕೊಲೆ ಮನೆಯೊಳಗೆ ನಡೆದಿದ್ದು, ಶವವನ್ನು ಗ್ರೈಂಡರ್‌ನಿAದ ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ, ವಿವಿಧ ಸ್ಥಳಗಳಲ್ಲಿ ಎಸೆಯಲಾಗಿದೆ. ರಾಹುಲ್ ದೇಹದ ಹಲವು ಭಾಗಗಳು ಇನ್ನೂ ಪತ್ತೆಯಾಗಿಲ್ಲ. ರಾಹುಲ್ ಒಬ್ಬ ಶೂ ವ್ಯಾಪಾರಿಯಾಗಿದ್ದು, ಇವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಮಗಳ ಹೇಳಿಕೆ ಹಲವು ಸಂಗತಿಗಳನ್ನು ದೃಢಪಡಿಸಿದೆ.


