ಅಪರಾಧ

ಪತಿಯ ಕೊಲೆ ಮಾಡಿ ಹಾರ್ಟ್ ಅಟ್ಯಾಕ್ ಎಂದು ಕತೆಕಟ್ಟಿದ್ದ ಪತ್ನಿ

Share It

ಹೈದರಾಬಾದ್: ಅಕ್ರಮ ಸಂಬAಧ ಹೊಂದಿದ್ದ ಪತ್ನಿಯೊಬ್ಬಳು ಪತಿಯನ್ನು ಕೊಲೆ ಮಾಡಿ, ಹಾರ್ಟ್ ಅಟ್ಯಾಕ್ ಎಂದು ನಾಟಕವಾಡಿ ನಂತರ ಸಿಕ್ಕಿಬಿದ್ದ ಘಟನೆ ತೆಲಂಗಾಣದ ಮೇಡಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ಮೂಲದ ವಿ.ಜೆ. ಅಶೋಕ್ (೪೫) ಮೃತ ವ್ಯಕ್ತಿ. ಇವರ ಪತ್ನಿ ಜೆ. ಪೂರ್ಣಿಮಾ (೩೬) ಮತ್ತು ಈಕೆಯ ಪ್ರಿಯಕರ ಹತ್ಯೆಗೈದ ಆರೋಪಿಗಳು. ವಿ.ಜೆ. ಅಶೋಕ್ ಮತ್ತು ಜೆ. ಪೂರ್ಣಿಮಾ ೨೦೧೧ ರಲ್ಲಿ ವಿವಾಹವಾಗಿದ್ದರು. ಅವರಿಗೆ ೧೨ ವರ್ಷದ ಮಗನಿದ್ದಾನೆ. ಅವರು ಬೋಡುಪ್ಪಲ್‌ನ ಪೂರ್ವ ಬೃಂದಾವನ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಯನಮಾಪೇಟೆಯ ಎಂಜಿನಿಯರಿAಗ್ ಕಾಲೇಜಿನಲ್ಲಿ ಅಶೋಕ್ ಲಾಜಿಸ್ಟಿಕ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.

ಪೂರ್ಣಿಮಾ ತಮ್ಮ ಮನೆಯಲ್ಲಿ ಪ್ಲೇಸ್ಕೂಲ್ ನಡೆಸುತ್ತಿದ್ದರು. ಇದಕ್ಕೂ ಮೊದಲು, ಬೋಡುಪ್ಪಲ್‌ನ ಇನ್ನೊಂದು ಪ್ರದೇಶದಲ್ಲಿ ವಾಸಿಸುತ್ತಿದ್ದಾಗ, ಪೂರ್ಣಿಮಾ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕಟ್ಟಡ ಕಾರ್ಮಿಕ ಮಹೇಶ್ (೨೨) ಎಂಬಾತನ ಜೊತೆ ವಿವಾಹೇತರ ಸಂಬAಧ ಬೆಳೆಸಿಕೊಂಡಿದ್ದರು. ಈ ವಿಷಯ ಗೊತ್ತಾದಾಗ ಪತಿ ಅಶೋಕ್ ಅವರು ಪತ್ನಿಗೆ ಎಚ್ಚರಿಕೆ ನೀಡಿ, ತಮ್ಮ ನಿವಾಸವನ್ನು ಪೂರ್ವ ಬೃಂದಾವನ ಕಾಲೋನಿಗೆ ಸ್ಥಳಾಂತರಿಸಿದ್ದರು.

ಆದರೂ ಸಹ ಪೂರ್ಣಿಮಾ ಮತ್ತು ಮಹೇಶ್ ವಿವಾಹೇತರ ಸಂಬAಧ ಮುಂದುವರೆದಿತ್ತು. ಇದು ಸಂಸಾರದಲ್ಲಿ ಆಗಾಗ ಜಗಳಕ್ಕೆ ಕಾರಣವಾಗಿತ್ತು. ಇದರಿಂದಾಗಿ ತಮ್ಮ ಸಂಬAಧಕ್ಕೆ ಅಡ್ಡಿಯಾದ ಪತಿಯನ್ನು ಕೊಲ್ಲಲು ಪೂರ್ಣಿಮಾ ನಿರ್ಧರಿಸಿದ್ದರು. ಪ್ರಿಯಕರ ಮಹೇಶ್ ಜತೆಗೂಡಿ ತನ್ನ ಸ್ನೇಹಿತ ಸಾಯಿಕುಮಾರ್ (೨೨) ಅವರ ಸಹಾಯ ಕೇಳಿದ್ದ. ಈ ಮೂವರು ಸೇರಿ ಡಿ. ೧೧ ರಂದು ಕಾಲೇಜಿನಿಂದ ಅಶೋಕ್ ಮನೆಗೆ ಬಂದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಮಹೇಶ್ ಮತ್ತು ಸಾಯಿಕುಮಾರ್ ಅಲ್ಲಿಂದ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ಬಳಿಕ ತಪ್ಪಿಸಿಕೊಳ್ಳಲು ಪತ್ನಿ ನಾಟವಾಡಿ, ಪೊಲೀಸರಿಗೆ ಸುಳ್ಳು ಕಥೆ ಕಟ್ಟಿದ್ದಳು. “ನನ್ನ ಗಂಡ ಸಂಜೆ ೬ ಗಂಟೆಗೆ ಮನೆಗೆ ಬಂದು ಮಲಗುವ ಕೋಣೆಯಲ್ಲಿ ಮಿಶ್ರಾಂತಿ ಪಡೆಯುತ್ತಿದ್ದರು. ನಾನು ಪ್ಲೇಸ್ಕೂಲ್‌ನಲ್ಲಿ ನನ್ನ ಕೆಲಸ ಮುಗಿಸಿ ರಾತ್ರಿ ೮ ಗಂಟೆಗೆ ಮನೆಗೆ ಬಂದೆ. ಬಳಿಕ ಊಟಕ್ಕೆ ಕರೆಯಲು ನನ್ನ ಮಗನನ್ನು ಕಳುಹಿಸಿದಾಗ, ನನ್ನ ಪತಿ ಬಾತ್ರೂಮ್‌ನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಬಳಿಕ ಮಲ್ಕಾಜ್‌ಗಿರಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ, ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಹೃದಯಾಘಾತದಿಂದ ನಿಧನರಾಗಿದ್ದು, ಅವರ ಸಾವಿನ ಬಗ್ಗೆ ಯಾವುದೇ ಅನುಮಾನಗಳಿಲ್ಲ” ಎಂದು ಪತ್ನಿ ಪೂರ್ಣಿಮಾ ನಂಬಿಸಿದ್ದರು.

ಆದರೂ, ಮೃತರ ದೇಹದ ಮೇಲಿನ ಗಾಯಗಳಿಂದಾಗಿ ಪೊಲೀಸರು ಆರಂಭದಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದರು. ಪೂರ್ಣಿಮಾ ಅವರ ನಡವಳಿಕೆ ಬಗ್ಗೆ ಅನುಮಾನಗೊಂಡ ಪೊಲೀಸರು ಮನೆ ಬಳಿಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಅಶೋಕ್ ಸಾವನ್ನಪ್ಪಿದ ದಿನ ಮಹೇಶ್ ಮತ್ತು ಸಾಯಿಕುಮಾರ್ ಮನೆಗೆ ಬಂದಿದ್ದು ಗೊತ್ತಾಗಿತ್ತು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸತ್ಯ ಬಾಯ್ಬಿಟ್ಟಿದ್ದಾರೆ. ಇದೀಗ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.


Share It

You cannot copy content of this page