ಬೆಂಗಳೂರು: ಶಕ್ತಿ ಯೋಜನೆಯಡಿ ಇನ್ಮುಂದೆ ಮಹಿಳೆಯರು ಆಧಾರ್ ಕಾರ್ಡ್ ತೋರಿಸದೆ ಓಡಾಡಬಹುದು. ಸರಕಾರ ಶಕ್ತಿ ಯೋಜನೆ ಫಲಾನುಭವಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ತೀರ್ಮಾನಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಶಕ್ತಿ ಯೋಜನೆಯಡಿ ಪ್ರಯಾಣಿಸುವ ಎಲ್ಲ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲು ತೀರ್ಮಾನಿಸಿದೆ. ಸ್ಮಾರ್ಟ್ ಕಾರ್ಡ್ ಪಡೆಯುವ ಮಹಿಳೆಯರು ಇನ್ಮುಂದೆ ಸಾರಿಗೆ ಬಸ್ಸುಗಳಲ್ಲಿ ಆಧಾರ್ ಕಾರ್ಡ್ ತೋರಿಸದೆ ಓಡಾಡಬಹುದು.
ಶಕ್ತಿ ಯೋಜನೆಯಡಿ ಟಿಕೆಟ್ ಪಡೆದು ಈಗಾಗಲೇ ಬಸ್ ಗಳಲ್ಲಿ ಓಡಾಡುತ್ತಿರುವ ಎಲ್ಲ ಮಹಿಳೆಯರು ಸ್ಮಾರ್ಟ್ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. ಶಕ್ತಿ ಯೋಜನೆಯನ್ನು ಮತ್ತಷ್ಟು ಸ್ಮಾರ್ಟ್ ಆಗಿಸುವ ಉದ್ದೇಶದಿಂದ, ಆಧಾರ್ ಕಾರ್ಡ್ ಕಿರಿಕಿರಿ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಸ್ಮಾರ್ಟ್ ಕಾರ್ಡ್ ಪಡೆದವರು ಆಧಾರ್ ಕಾರ್ಡ್ ಇಲ್ಲದೆ ಓಡಾಡಬಹುದು.
ಕಾರ್ಡ್ ವಿತರಣೆಗೆ ಉಚಿತ ಬಸ್ ಪ್ರಯಾಣಕ್ಕೆ ವಿಧಿಸಿದ್ದ ಷರತ್ತುಗಳನ್ನಷ್ಟೇ ಮುಂದುವರಿಸಲಾಗುತ್ತದೆ. ಕಾರ್ಡ್ ವಿತರಣೆ, ಶುಲ್ಕ ಸಂಗ್ರಹ ಅಥವಾ ಉಚಿತ ವಿತರಣೆಗೆ ಸಂಬAಧಿಸಿದAತೆ ವ್ಯವಹಾರ ಸಲಹೆಗಾರರನ್ನು ನೇಮಿಸಿ, ಅನಂತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸಂಪುಟ ತೀರ್ಮಾನಿಸಿದೆ.

