ಕಳೆದ ಬಾರಿಯ ಏಷ್ಯಾ ಕಪ್ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ಜಯಗಳಿಸಿದ್ದ ಭಾರತ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಹಾಗೆಯೇ ಮತೊಮ್ಮೆ ಶ್ರೀಲಂಕಾದಲ್ಲೇ ನೆಡೆಯಲಿರುವ ಟಿ 20 ಏಷ್ಯಾ ಕಪ್ ಗೆ 15 ಜನರ ತಂಡವನ್ನು ಪ್ರಕಟ ಮಾಡಿದೆ.
ಈ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮತ್ತೆ ನಾಯಕಿಯಾಗಿ ಮೊನ್ನೆಡೆಸಲಿದ್ದಾರೆ. ಇನ್ನೂ ಎಡಗೈ ಸ್ಪೋಟಕ ಆಟಗಾರ್ತಿ ಸ್ಮೃತಿ ಮಂಧಾನ ಉಪನಾಯಕಿಯಾಗಿ ಆಡಲಿದ್ದಾರೆ. ಬ್ಯಾಟ್ಸ್ ಮನ್ ಗಳಾಗಿ ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದಯಾಲನ್ ಹೇಮಲತಾ, ಉಮಾ ಚೆಟ್ರಿ, ಆಯ್ಕೆಯಾಗಿದ್ದಾರೆ.
ವಿಕೆಟ್ ಕೀಪಿಂಗ್ ವಿಭಾಗದಲ್ಲಿ ರಿಚಾ ಘೋಷ್, ಆಲ್ ರೌಂಡರ್ ಗಳಾಗಿ ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಆಶಾ ಶೋಭಾನಾ , ಶ್ರೇಯಾಂಕ ಪಾಟೀಲ್, ಸಜನಾ ಸಜೀವನ್, ಇನ್ನೂ ಬೌಲಿಂಗ್ ವಿಭಾಗದಲ್ಲಿ ರೇಣುಕಾ ಸಿಂಗ್ ಠಾಕೂರ್, ರಾಧಾ ಯಾದವ್, ಅರುಂಧತಿ ರೆಡ್ಡಿ ಕಣಕ್ಕಿಳಿಯಲಿದ್ದಾರೆ.
ಮೀಸಲು ಆಟಗಾರ್ತಿಯರಾಗಿ ಶ್ವೇತಾ ಸೆಹ್ರಾವತ್, ಸೈಕಾ ಇಶಾಕ್, ತನುಜಾ ಕನ್ವರ್, ಮೇಘನಾ ಸಿಂಗ್ ಆಯ್ಕೆಯಾಗಿದ್ದಾರೆ. ಬಳಿಕ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಈ ಬಾರಿಯ ಏಷ್ಯಾ ಕಪ್ ಗೆ ಕಾಲಿಡಲಿದೆ.