ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಕ್ಕಿ ಕಾರ್ಮಿಕ ಸಾವು
ಬೆಳಗಾವಿ: ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಬೆಳಗಾವಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿರುವ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಸಚಿನ್ ಯಾಮನಣ್ಣಿ ಮೃತ ಕಾರ್ಮಿಕನಾಗಿದ್ದಾನೆ. ಈತ ಕಳೆದ ಹತ್ತು ದಿನಗಳಖ ಹಿಂದಷ್ಟೇ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ.
ಮೃತ ಸಚ್ಚಿನ್ ಅಮ್ಮಿನಭಾವಿ ಮೂಲದವನಾಗಿದ್ದು, ಕ್ರಷರ್‌ಗೆ ಸುಣ್ಣ ಹಾಕುವಾಗ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


