ಬೆಂಗಳೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕ್ರೆಡೈ ಸಂಸ್ಥೆಯು ದೇವನಹಳ್ಳಿಯಲ್ಲಿ ಬ್ರಿಗೇಡ್ ಆರ್ಚರ್ಡ್ಸ್ ಆವರಣದಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಕ್ರೆಡೈ ಬೆಂಗಳೂರು ಅಧ್ಯಕ್ಷ ಅಮರ್ ಮೈಸೂರು ಅವರೊಂದಿಗೆ ಖ್ಯಾತ ಜಲ ಸಂರಕ್ಷಣಾ ತಜ್ಞ ಮತ್ತು ಪರಿಸರವಾದಿ ಆನಂದ್ ಮಲ್ಲಿಗಾವ್ಡ್ ಭಾಗವಹಿಸಿದ್ದರು.
ಬ್ರಿಗೇಡ್ ಆರ್ಚರ್ಡ್ಸ್ ಸಿಬ್ಬಂದಿಯಿಂದ ಪೋಷಣೆ ಮತ್ತು ಆರೈಕೆ ಮಾಡಲಾಗುವ ಒಟ್ಟು 500 ಸಸಿಗಳನ್ನು ಕ್ರೆಡೈ ಸದಸ್ಯರು ನೆಟ್ಟರು.

