ಯಾದಗಿರಿ: ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ಮೃತಪಟ್ಟು, 7 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹತ್ತಿಗುಡೂರು ಬಳಿ ನಡೆದಿದೆ.
ಈ ಅಪಘಾತದಲ್ಲಿ ಗಾಯಗೊಂಡ 7 ಜನ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ. ಕಲಬುರಗಿಯಿಂದ ಬೆಂಗಳೂರು ಕಡೆ ತೆರಳುತ್ತಿದ್ದ ಬಸ್ನಲ್ಲಿ 37 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಹತ್ತಿಗುಡೂರು ಹಳ್ಳದ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ.
ಬಾಗಲಕೋಟೆ ಭಾಗದ ಬಸ್ ಚಾಲಕ ಯಾದಗಿರಿ, ಕಲಬುರಗಿ, ಶಹಾಪುರ ರಸ್ತೆ ಮಾರ್ಗಕ್ಕೆ ಹೊಸ ಅನುಭವ ಇರುವ ಕಾರಣ ರಸ್ತೆ ಹಿಡಿತ ಅರಿಯದ ಚಾಲಕನ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗುತ್ತಿದೆ. ಭಾನುವಾರ ರಾತ್ರಿ 11.40 ರ ಸುಮಾರು ಹತ್ತಿಗುಡೂರು ಬ್ರಿಡ್ಜ್ ಕ್ರಾಸ್ ಬಳಿ ಎದುರಿಗೆ ವಾಹನ ಬಂದ ತಕ್ಷಣ ರಸ್ತೆ ಬದಿಗೆ ತೆಗೆದುಕೊಂಡ ಬಸ್ನಿ ಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿ ಬಿದ್ದಿದೆ. ಶಹಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅವಘಡ ನಡೆದಿದೆ.

