ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬಿರುಗಾಳಿಯಿಂದಾಗಿ ಮುಖ್ಯ ವಿದ್ಯುತ್ ಲೈನ್‌ಗಳಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮಂಗಳವಾರ ಸಂಜೆ ವೇಳೆ ಏಕಾಏಕಿ ಉಂಟಾದ ಭಾರೀ ಪ್ರಮಾಣದ ಗಾಳಿ ಬೀಸಿದ್ದು, ಗಾಳಿಗೆ ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವ ಮುಖ್ಯ ತಂತಿಗಳಲ್ಲಿ ಘರ್ಷಣೆಯುಂಟಾಗಿದ್ದು, ಈಡೀ ಗ್ರಾಮದಲ್ಲಿ ಸಂಪರ್ಕಿಸುವ ವಿದ್ಯುತ್ ತಂತಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇನ್ನೂ ಮನೆ ಮೇಲೆ ವಿದ್ಯುತ್ ತಂತಿ ಬೀಳುತ್ತಾ ಇದ್ದಂತೆ ಜನರು ಎದ್ನೋ ಬಿದ್ನೋ ಎನ್ನುವ ಹಾಗೆ ಮನೆಯಿಂದ ಓಡಿ ಬಂದಿದ್ದಾರೆ. ಇದರಿಂದಾಗಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಳೆ ಟಿಸಿ ವಿದ್ಯುತ್ ತಂತಿಗೆ ತಗುಲಿದ ಕರೆಂಟ್ ಶಾಕ್ ತಗುಲಿದ್ದು, ಜಾಲಿಬೆಂಚಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ಬಳಿಯ ಶಾರ್ಟ್ ಸರ್ಕ್ಯೂಟ್ ಕಂಬ ಅಳವಡಿಸಲಾಗಿತ್ತು. ಭಾರಿ ಬಿರುಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಕತ್ತರಿಸಿ ಬಿದ್ದಿದೆ. ನೂರಕ್ಕೂ ಹೆಚ್ಚು ಮನೆಗಳಲ್ಲಿ ಟಿವಿ, ಪ್ರಿಡ್ಜ್, ಫ್ಯಾನ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಭಸ್ಮವಾಗಿದೆ.
ಅಲ್ಲದೇ ಗ್ರಾಮದ ರಾಯಪ್ಪ ಪಸಲಾದಿ ಹಾಗೂ ರಾಜ ಅಹ್ಮದ್ ಎಂಬುವರಿಗೆ ವಿದ್ಯುತ್ ತಗುಲಿ ಗಾಯಗಳಾಗಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ. ಸುರಪುರ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಸುಮಾರು 45ಕ್ಕೂ ಹೆಚ್ಚು ವರ್ಷಗಳ ಹಿಂದೆ ಅಳವಡಿಸಿದ್ದ ತಂತಿ ಹಳೆಯದಾಗಿದೆ. ಇದರಿಂದಾಗಿ ವಿದ್ಯುತ್ ತಂತಿ ಕತ್ತರಿಸಿ ಬೀಳುತ್ತಿದೆ. ಇದರಿಂದಾಗಿ ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.