ನವದೆಹಲಿ: ವಿಧಾನಸಭಾ ಬಜೆಟ್ ಅಧಿವೇಶನ ಸಮಯದಲ್ಲಿ ಸಚಿವ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾಗ ಸದನದಲ್ಲಿ ಹರಿದಾಡಿದ ಚೀಟಿಯೊಂದರ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಈ ಬಗ್ಗೆ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಆ ಚೀಟಿ ಯಾರು ಕಳಿಸಿದ್ದು ಅಂತ ಗೊತ್ತಿಲ್ಲ, ಆದರೆ ಹಿರಿಯ ಸಚಿವ ಕೆ.ಎನ್. ರಾಜಣ್ಣನವರು ಬಹಿರಂಗವಾಗೇ ಹನಿಟ್ರ್ಯಾಪ್ ಪ್ರಯತ್ನ ತನ್ನ ಮೇಲೆ ನಡೆಯುತ್ತಿದೆ ಅಂತ ಹೇಳಿದ್ದಾರೆ.
ಅದನ್ನು ಯಾಕೆ ಮಾಡುತ್ತಿದ್ದಾರೆ? ಯಾಕೆ ಬ್ಲ್ಯಾಕ್ ಮೇಲ್ ಪ್ರಯತ್ನ ನಡೆದಿದೆ? ಅಂತ ಜನತೆಗೆ ಗೊತ್ತಾಗಬೇಕು, ಸಚಿವ ಕೆ.ಎನ್ ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ ಆದರೆ ಅವರ ಮಾತಿನ ಧಾಟಿ ನೋಡಿದರೆ ಅವರದ್ದೇ ಪಕ್ಷದ ಮಹಾನ್ ನಾಯಕನಾಗಿರುವ ಮಂತ್ರಿಯೊಬ್ಬ ಭಾಗಿಯಾಗಿರುವಂತಿದೆ ಎಂದು ಯತ್ನಾಳ್ ಹೇಳಿದರು.