ಮಳೆಗಾಲದಲ್ಲಿ ಈ ಯೋಗ ಮಾಡಿದ್ರೆ ಸಾಕು!! ಕಾಯಿಲೆ ಇಂದ ಮುಕ್ತಿ ಖಂಡಿತ

IMG-20240614-WA0001
Share It

ಪತಿ ನಿತ್ಯ ಯೋಗ ಮಾಡುವ ಅಭ್ಯಾಸ ನಿಮಗಿದೆಯಾ. ಆ ಅಭ್ಯಾಸ ಇಟ್ಟುಕೊಂಡವರು ನಿಜವಾಗಿಯೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿರುತ್ತದೆ.

ಈಗ ಮಾನ್ಸೂನ್ ಮಳೆ ಇರುವುದರಿಂದ ನಮ್ಮ ದೇಹ ಸೋಮಾರಿಯಾಗುವುದು , ಅಥವಾ ಚಳಿಗೆ ನಡುಗುವುದು ಹೀಗೆ ಅನೇಕ ಸಮಸ್ಯೆಗೆ ಒಳಗಾಗುತ್ತದೆ. ಆದ್ರೆ ಈ ಮೂರು ಆಸನಗಳನ್ನು ನಿತ್ಯ ಮಾಡುವುದರಿಂದ ನಿಮ್ಮ ದೇಹ ಇನ್ನಷ್ಟು ಸದೃಢವಾಗುತ್ತದೆ. ಪ್ರಾಣಯಮದ ಜೊತೆ ಜೊತೆಗೆ ಈ ಆಸನಗಳನ್ನು ಮಾಡುವುದು ಒಳ್ಳೆಯದು. ಈ ಮೂರು ಆಸನಗಳ ಬಗ್ಗೆ ಈ ಕೆಳಗಿನಂತೆ ತಿಳಿಯೋಣ ಬನ್ನಿ.

ಕಪಾಲಭಾತಿ ಪ್ರಾಣಯಾಮ

ಈ ಆಸನವನ್ನು ಮಾಡುವುದರಿಂದ ನಮ್ಮ ದೇಹದ ಕೊಳೆಯನ್ನು ತೆಗೆದು ಹಾಕುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ದೇಹವನ್ನು ಬೆಚ್ಚಗೆ ಇಡುವುದರ ಜೊತೆಗೆ ಶ್ವಾಸಕೋಶವನ್ನು ಬಲಪಡಿಸುತ್ತದೆ.

ಈ ಆಸನವನ್ನು ಮಾಡುವ ವಿಧಾನ

ಮೊದಲಿಗೆ ನಿಮ್ಮ ಬೆನ್ನು ಮೂಳೆಯನ್ನು ನೇರ ಗೊಳಿಸಿ ಕುಳಿತುಕೊಳ್ಳಿ. ಬಳಿಕ ನಿಮ್ಮ ಎರಡು ಕಣ್ಣುಗಳನ್ನು ಮೃದುವಾಗಿ ಮುಚ್ಚಿ. ನಂತರ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುವು ಹಾಗೂ ಬಿಡುವುದು ಹೀಗೆ 10 ರಿಂದ 15 ಬಾರಿ ಮಾಡಿ.

ಅಧೋ ಮುಖ ಸ್ವನಾಸನ

ಈ ಆಸನವು ನಮ್ಮ ದೇಹದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ದೇಹವನ್ನು ಸುಸ್ಥಿರ ಗೊಳಿಸುತ್ತದೆ. ಅಲ್ಲದೇ ನಮ್ಮ ದೇಹ ದಪ್ಪ ವಾಗಲು ಸಹಾಯ ಮಾಡುತ್ತದೆ.

ಈ ಆಸನವನ್ನು ಮಾಡುವ ವಿಧಾನ

ಮೊದಲಿಗೆ ನಿಮ್ಮ ಕೈ ಮತ್ತು ಕಾಲುಗಳ ಮೇಲೆ ದೇಹವನ್ನು ಇರಿಸಿ ಬಳಿಕ ನಿಮ್ಮ ಬೆನ್ನನ್ನು ಮೇಲಕ್ಕೆ ಎತ್ತಿ. ವಿ ಆಕಾರದಲ್ಲಿ ನಿಮ್ಮ ದೇಹವು ಬೆಂಡಾಗಿರಬೇಕು. ಇದನ್ನು ಕೆಲ ನಿಮಿಷದ ವರೆಗೆ ಮಾಡಿ

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದಲ್ಲಿ ಕೊಬ್ಬಿನಂಶ ಕಡಿಮೆಯಾಗುತ್ತದೆ. ಇದು ಒಟ್ಟು 12 ಯೋಗಗಳನ್ನು ಒಳಗೊಂಡ ದೀರ್ಘವಾದ ಆಸನವಾಗಿದೆ . ಇದು ನಮ್ಮ ದೇಹದ ಸ್ಪ್ರಿಂಗಿನಂತೆ ಬದಲಿಸುತ್ತದೆ. ರಕ್ತ ಪರಿಚಲನೆಗೆ ಸಹಕಾರಿಯಾಗಿದೆ. ಆಲಸ್ಯವನ್ನು ದೂರ ಮಾಡುತ್ತದೆ.

ಒಂದು ವೇಳೆ ನಿಮಗೆ ಯೋಗದ ಅಭ್ಯಾಸ ಇಲ್ಲದೆ ಹೋದರೆ ಯೋಗ ಶಿಕ್ಷಕರನ್ನು ಭೇಟಿ ಮಾಡಿ ಅಥವಾ ನಿಮಗೆ ಯೋಗ ಮಾಡುವಾಗ ಸಾಕು ಅನ್ನಿಸಿದರೆ ನಿಲ್ಲಿಸಿ. ನಿಮಗೆ ಕಂಫರ್ಟ್ ಆಗಿರುವಂತೆ ನೋಡಿಕೊಳ್ಳಿ, ಎಚ್ಚರ ತಪ್ಪಿದರೆ ಸಮಸ್ಯೆಯಾಗಬಹುದು.


Share It

You cannot copy content of this page