ಉಪಯುಕ್ತ ಸುದ್ದಿ

ಸೆಲ್ಫಿಗಾಗಿ ಪ್ರಾಣ ಕಳೆದುಕೊಂಡ ಯುವತಿ!!

Share It

ಸಾಮಾಜಿಕ ಜಾಲತಾಣದಲ್ಲಿ ಸಿಗುವ ಒಂದೆರಡು ಲೈಕ್ ಕಾಮೆಂಟ್ ಗಳಿಗೆ ಜೀವವನ್ನೇ ಕಳೆದುಕೊಂಡ ಘಟನೆ ಮೆಕ್ಸಿಕೋದ ಹಿಡಾಲ್ಗೋ ದಲ್ಲಿ ನಡೆದಿದೆ. ಯುವತಿಯೊಬ್ಬಳು ಚಲಿಸುತ್ತಿದ್ದ ರೈಲಿನ ಮುಂಭಾಗದಲ್ಲಿ ನಿಂತು ಸೆಲ್ಪಿ ತೆಗೆದುಕೊಳ್ಳಲು ಹೋಗಿ ರೈಲಿಗೆ ತಲೆ ತಗುಲಿ ಸಾವನ್ನಪ್ಪಿದ್ದಾಳೆ. ಸದ್ಯಕ್ಕೆ ಸಾಮಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

ಸ್ಟ್ರೀಮ್ ಇಂಜಿನ ಅನ್ನು ಒಳಗೊಂಡ ರೈಲು ಕೆನಡಾದಿಂದ ಮೆಕ್ಸಿಕೋ ನಗರಕ್ಕೆ ನಿತ್ಯ ಪ್ರಯಾಣಿಸುತ್ತದೆ. ಈ ರೈಲು ಹಿಡಾಲ್ಗೋದಲ್ಲಿ Canadian Pacific 2816 ಎಂದೇ ಪ್ರಸಿದ್ಧಿ ಪಡೆದಿರುವ ಲೋಕೋಮೋಟಿವ್ ಎಂಪ್ರೆಸ್ 2816 ಅನ್ನು ನೋಡಲು ಹೆಚ್ಚಿನ ಜನರು ಬಂದಿದ್ದರು. ಆ ವೇಳೆ ಡುಲ್ಸೆ ಅಲೊಂಡ್ರಾ (28) ಎಂಬ ಯುವತಿಯು ಬರುತಿದ್ದ ರೈಲಿನ ಜೊತೆಗೆ ಸೇಲ್ಪಿ ತೆಗೆದುಕೊಳ್ಳುತ್ತಿದ್ದಳು.

ರೈಲು ಹತ್ತಿರವಾಗುತ್ತಿದ್ದಂತೆ ಕೆಳಗೆ ಮೊಣಕಾಲು ಉರಿ ಫೋಟೊ ತೆಗೆದುಕೊಳ್ಳುವಾಗ ಎಂಜಿನ ನ ಮುಂಭಾಗದ ತಲೆಗೆ ತಗುಲಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ. ಡುಲ್ಸೆ ಅಲೊಂಡ್ರಾ ಒಬ್ಬಳು ಶಿಕ್ಷಕಿಯಾಗಿದ್ದು ಆಕೆಗೆ ಒಬ್ಬಳು ಮಗಳಿದ್ದಾಳೆ ಎಂಬ ಮಾಹಿತಿ ಮಾಧ್ಯಮಗಳಿಂದ ತಿಳಿದು ಬಂದಿದೆ.


Share It

You cannot copy content of this page