ZIMvsIND 2024: ಸಿಕಂದರ್ ನಾಯಕತ್ವದಲ್ಲಿ ಭಾರತ ವಿರುದ್ಧದ ಟಿ-20 ಸರಣಿಗೆ ಜಿಂಬ್ವಾಬ್ವೆ ತಂಡ ಪ್ರಕಟ
ಜಿಂಬಾಂಬೆ ಹಾಗೂ ಭಾರತದ ನಡುವೆ ಇದೇ ಜುಲೈ 6 ರಿಂದ 5 T20 ಪಂದ್ಯಗಳು ನಡೆಯಲಿವೆ. ಪಂದ್ಯಗಳು ಜಿಂಬಾಂಬೆ ರಾಜಧಾನಿ ಹರಾರೆ ಯಲ್ಲಿ ನಡೆಯಲಿದೆ. ಜುಲೈ 1 ರಂದು ಜಿಂಬಾಂಬೆ ತಂಡವು ತನ್ನ ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಿದೆ. ಜಿಂಬಾಂಬೆ ತಂಡದ ನಾಯಕನಾಗಿ ಸಾಕಷ್ಟು ಅನುಭವವುಳ್ಳ ಸಿಕಂದರ್ ರಾಜಾ ನಾಯಕರಾಗಿದ್ದಾರೆ. ತಂಡದಲ್ಲಿ ಅಂಟಮ್ ನಖ್ವಿ ಸ್ಥಾನ ಪಡೆದಿದ್ದಾರೆ.
ಅಂಟಮ್ ನಖ್ವಿ ಅವರ ಪೌರತ್ವವನ್ನು ದೃಢಪಡಿಸುವ ಸಲುವಾಗಿ ಭಾರತ ವಿರುದ್ಧದ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ ಎಂದು ಜಿಂಬಾಂಬೆ ಕ್ರಿಕೆಟ್ ತಿಳಿಸಿದೆ. 2024 ರ T20 ವಿಶ್ವ ಕಪ್ ಗೆ ಅರ್ಹತೆ ಪಡೆಯುವಲ್ಲಿ ಜಿಂಬಾಂಬೆ ಮುಗ್ಗರಿಸಿತ್ತು. ಬಳಿಕ ಜಸ್ಟಿನ್ ಸಮ್ಮನ್ಸ್ ಅವರು ಕೋಚ್ ಹುದ್ದೆಯನ್ನು ಅಲಂಕರಿಸಿದರು. ಮತ್ತೆ ತನ್ನ ಛಾಪು ಮೂಡಿಸಲು ಜಿಂಬಾಂಬೆ ತಂಡ ಸಿದ್ಧವಾಗಿದೆ.
ಜಿಂಬಾಬ್ವೆ ತಂಡ:
ಸಿಕಂದರ್ ರಾಜಾ (ನಾಯಕ), ಅಕ್ರಮ್ ಫರಾಜ್, ಬೆನೆಟ್ ಬ್ರಿಯಾನ್, ಕ್ಯಾಂಪ್ಬೆಲ್ ಜೋನಾಥನ್, ಚಟಾರಾ ತೆಂಡೈ, ಜೊಂಗ್ವೆ ಲ್ಯೂಕ್, ಕೈಯಾ ಇನ್ನೋಸೆಂಟ್, ಮದಂಡೆ ಕ್ಲೈವ್, ಮಡ್ವೆರೆ ವೆಸ್ಲಿ, ಮಾವುಮಣಿ ತಡಿವಾನಾಶೆ, ಮಸಕಡ್ಜಾ ವೆಲ್ಲಿಂಗ್ಟನ್, ಮಾವುಟಾ ಬ್ರಾಂಡನ್, ಮುಜರಬಾನಿ ಬ್ಲೆಸ್ಸಿಂಗ್, ಮೈಯರ್ಸ್ ಡಿಯೋನ್, ನಖ್ವಿ ಅಂಟಮ್, ಎನ್ಗರವಾ ರಿಚರ್ಡ್, ಶುಂಬಾ ಮಿಲ್ಟನ್.


