ಬೆಂಗಳೂರು ಸಂಚಾರ ಪೊಲೀಸರಿಂದ ಎಚ್ಚರಿಕೆ

Beṅgaḷūru san̄cāra polīsarinda eccarike 33 / 5,000 Warning from Bangalore Traffic Police
Share It

ಬೆಂಗಳೂರು: ನಗರದಲ್ಲಿ ಕಾರಿನಲ್ಲಿ ಚಲಿಸುವಾಗ ಸಂಚಾರ ನಿಯಮ ಉಲ್ಲಂಘಿಸಿ ಸನ್ ರೂಫ್‌ನಿಂದ ಹೊರಗೆ ನಿಂತು ಪ್ರಯಾಣಿಸುತ್ತಿದ್ದವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನ ಅಧಿಕೃತ ಖಾತೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಪೋಸ್ಟ್ ಹಂಚಿಕೊಂಡಿದ್ದಾರೆ.

‘ಒಂದು ತಪ್ಪು ನಡೆಯಿಂದಾಗಿ ಅಪಾಯಗಳು ಎದುರಾಗಬಹುದು. ಮನರಂಜನೆಗಾಗಿ ಈ ರೀತಿ ವರ್ತನೆ ಸರಿಯಿಲ್ಲ. ಇದು ಎಲ್ಲರಿಗೂ ಅಪಾಯಕಾರಿ. ರೋಮಾಂಚನಕ್ಕಾಗಿ ಜೀವಗಳನ್ನು ಪಣಕ್ಕಿಡಬೇಡಿ’ ಎಂದು ಪೊಲೀಸರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ವಿಡಿಯೊದಲ್ಲಿ ಕಾಣಿಸಿಕೊಂಡ ದೃಶ್ಯಗಳನ್ನು ಆಧರಿಸಿ, ಆ‌ರ್.ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಅಜಾರೂಕತೆಯಿಂದ ವಾಹನೆ ಚಾಲನೆ ಮಾಡಿದ ಸವಾರನ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಕೊಂಡು ದಂಡ ವಿಧಿಸಿದ್ದು, ಇದು ಟಿಕೆಟ್ ಅಲ್ಲ. ಪ್ರಕರಣಕ್ಕೆ ದಂಡ ವಿಧಿಸಲಾಗಿದೆ ಎಂದೂ ತಿಳಿಸಲಾಗಿದೆ.


Share It

You May Have Missed

You cannot copy content of this page