ಮುಡಾ ವಿಚಾರಕ್ಕೆ ಬಿಜೆಪಿ ಪಾದಯಾತ್ರೆ ವಿರುದ್ದವೇ ಕಿಡಿಕಾರಿದ ಸಚಿವ ಹೆಚ್‌ಡಿ ಕುಮಾರಸ್ವಾಮಿ

Share It

ಪಾದಯಾತ್ರೆಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪಾದಯಾತ್ರೆ ಮಾಡುವುದು ಬಿಜೆಪಿಯವರ ವ್ಯಯುಕ್ತಿಕ ನಿಲುವು. ನಮಗೆ ಜನತೆಯ ಸಮಸ್ಯೆಗಳು ಮುಖ್ಯ, ಹಾಗಾಗಿ ನಾನು ಮತ್ತು ನಮ್ಮ ಕಾರ್ಯಕರ್ತರು ನಿರ್ಧರಿಸಿದ್ದೇವೆ ನಾವು ಈ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಪಾದಯಾತ್ರೆ ಕುರಿತು ಜನರಲ್ಲಿ ನಕರಾತ್ಮಾಕ ಭಾವನೆಗಳು ಇವೆ, ಜನರ ಭಾವನೆಗಳಿಗೆ ಬೆಲೆ ಕೊಡುತ್ತೇನೆ ಹಾಗಾಗಿ ಇಂತಹ ಸಂಧರ್ಭದಲ್ಲಿ ಇದು ಸೂಕ್ತವಲ್ಲ ಎಂದು ಹಿಂದೆ ಸರಿದಿದ್ದೇವೆ ಎಂದು ಸ್ಪಷ್ಠವಾಗಿ ತಿಳಿಸಿದರು.

ಇವತ್ತು ಹಲವು ಕಡೆ ನಾನಾ ರೀತೀಯ ಸಮಸೈಗಳು ಆಗುತ್ತಿದ್ದು, ಇಂತಹ ಸಂಧರ್ಭದಲ್ಲಿ ಜನಸಾಮಾನ್ಯರ ಬೆಂಬಲ ಪಡೆಯಲು ಸಮಸ್ಯೆ ಆಗುತ್ತದೆ ಅದರ ಜೊತೆಗೆ ಜನತೆಯ ಟೀಕೆಗಳು ಆಗುತ್ತೀರುವುದರಿಂದ ನಮ್ಮ ಪಕ್ಷದ ತೀರ್ಮಾನ ನಾವು ಮಾಡಿದ್ದೇವೆ ಎಂದು ತಿಳಿಸಿದರು.
ಮುಂದುವರೆದು ಆ ಭಾಗದ ಜನರ ಭಾವನೆಗಳು ಮುಖ್ಯ ನನಗೆ ಇಂತಹ ಸಂಧರ್ಭದಲ್ಲಿ ಪಾದಯಾತ್ರೆ ಮಾಡುವುದು ಏನಿದೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಪ್ರಶ್ನಿಸಿದರು.

ಮೈತ್ರಿಯ ಕುರಿತು ಕೇಳಿದ ಪ್ರಶ್ನೆಗೆ, ಇವತ್ತು ನಾಡಿನಲ್ಲಿ ಆಗುತ್ತಿರುವ ಪ್ರಾಕೃತಿಕ ವಿಕೋಪದಿಂದ ಎನೆಲ್ಲಾ ಸಮಸ್ಯೆಗಳು ಆಗುತ್ತಿರುವುದನ್ನು ನೋಡಿ ನೋಡಿ ಸಹ ಇದರಿಂದ ಜನರ ಮನಸ್ಸಿನಲ್ಲಿ ಏನಾಗಬಹುದೆಂದು ಅರಿತುಕೊಂಡು ಈ ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ ಎಂದು ತಿಳಿಸಿದರು.


Share It

You May Have Missed

You cannot copy content of this page