ನವದೆಹಲಿ: ಆರ್ ಸಿಬಿ ಪ್ಲೇ ಆಫ್ ಹಂತದ ಪ್ರವೇಶದ ಮತ್ತೊಂದು ಮೆಟ್ಟಿಲು ತೆರೆದುಕೊಂಡಿದ್ದು, ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ ಆರ್.ಸಿ.ಬಿ ಕನಸಿಗೆ ಮತ್ತೊಮ್ಮೆ ನೀರೆರದಿದೆ.
ಟಾಟಾಐ ಐಪಿಎಲ್ ನ 64 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೆಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ತಂಡಗಳು ಮುಖಾಮುಖಿ ಯಾದವು. ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ, ಟ್ರಿಸ್ಟ್ನ್ ಸ್ಟಬ್ಸ್ 57 ಮತ್ತು ಅಭಿಷೇಕ್ ಪೋರೆಲ್ 58 ಅದ್ಭುತ ಅರ್ಧಶತಕದ ನೆರವಿನಿಂದ 209 ರನ್ ಗಳ ಬೃಹತ್ ಗುರಿ ನೀಡಿತು.
ಗುರಿಯನ್ನು ಬೆನ್ನಟ್ಟಿದ ಲಕ್ನೋ ತಂಡ 44 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ಕ್ವಿಂಟನ್ ಡಿ ಕಾಕ್ 12, ನಾಯಕ ಕೆ.ಎಲ್ ರಾಹುಲ್ 5, ಮಾರ್ಕಸ್ ಸ್ಟೋಯಿನಿಸ್ 5, ದೀಪಕ್ ಹೂಡಾ ಸೊನ್ನೆಗೆ ಓಟಾದರು. ಬಳಿಕ ಆಯುಷ್ ಬದೋನಿ ಕೂಡ ಬೇಗನೆ ಔಟಾಗಿ ತೆರಳಿದರು. ಬಿರುಸಾಗಿ ಬ್ಯಾಟ್ ಬೀಸಿದ ನಿಕಲಸ್ ಪೂರನ್ 27 ಎಸೆತಗಳಲ್ಲಿ61 ರನ್ ಗಳಿಸಿ ಔಟಾದರು.
ಕೃನಾಲ್ ಪಾಂಡ್ಯ 18 ರನ್ ಗೆ ವಿಕೆಟ್ ಒಪ್ಪಿಸಿದರೆ, ನಂತರ ಬಂದ ಅರ್ಷದ್ ಖಾನ್ 58, ಯದುವೀರ್ ಸಿಂಗ್ ಚರಕ್ 14 ಮತ್ತು ಬಿಷ್ಣೋಯಿ 2 ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಹೀಗಾಗಿ, ಲಕ್ನೋ ತಂಡ ಒಂಬತ್ತು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ, ಇನ್ನಿಂಗ್ಸ್ ಮುಗಿಸಿತು.
ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ, ಅಭಿಷೇಕ್ ಪೊರೇಲ್ 58, ಹೋಪ್ 38, ಪಂತ್ 33, ಸ್ಟಬ್ಸ್ 57, ಅಕ್ಷರ್ 14 ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು. ಲಕ್ನೋ ಪರ ನವೀನ್ ಉಲ್ ಹಕ್ ಎರಡು ವಿಕೆಟ್ ಪಡೆದರು. ಆ ಮೂಲಕ ಲಕ್ನೋ ಪ್ಲೇ ಆಫ್ ಹಾದಿಯನ್ನು ಬಹುತೇಕ ಕೊನೆಗಾಣಿಸಿದ ಡೆಲ್ಲಿ, ಆರ್ ಸಿಬಿ ಅವಕಾಶವನ್ನು ಮತ್ತಷ್ಟು ಹೆಚ್ಚಿಸಿತು.