ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಯೂಟ್ಯೂಬ್ ಚಾನೆಲ್ ಕೇವಲ ಒಂದು ತಿಂಗಳ ಅವದಿಯಲ್ಲಿ ಅತಿ ಹೆಚ್ಚು ಅಂದರೆ, 30 ಕೋಟಿ ಗೂ ಅಧಿಕ ವೀಕ್ಷಣೆ ಪಡೆದುಕೊಳ್ಳುವ ಮೂಲಕ ದಾಖಲೆ ಬರೆದಿದೆ.
ರಾಹುಲ್ ಗಾಂಧಿ ಅವರ ವಿಡಿಯೋಗಳು ಭಾರತ್ ಜೋಢೋ ಯಾತ್ರೆಯ ನಂತರ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಅದರಲ್ಲೂ ಚುನಾವಣೆ ಘೋಷಣೆಯಾದ ನಂತರ ರಾಹುಲ್ ಗಾಂಧಿ ಅವರ ಭಾಷಣವನ್ನು ಅತಿ ಹೆಚ್ಚು ಜನರ ವೀಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ, ಮೂವತ್ತು ಕೋಟಿ ವೀಕ್ಷಣೆ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ.
ರಾಜಕೀಯ ವ್ಯಕ್ತಿ ಅಥವಾ ರಾಜಕೀಯ ಸುದ್ದಿ ಚಾನೆಲ್ ಗಳಲ್ಲೇ ಅತಿ ಹೆಚ್ಚು ವೀಕ್ಷಣೆ ಇದಾಗಿದ್ದು, ಮೋದಿ ಅವರ ಯೂಟ್ಯೂಬ್ ಚಾನೆಲ್‌ನ ವೀಕ್ಷಣೆಗಿಂತ ದುಪ್ಪಟ್ಟಾಗಿದೆ.
ಈ ಹಿಂದೆ ರಾಜಕೀಯ ವ್ಯಕ್ತಿಗಳಲ್ಲೆ ಅತಿ ಹಚ್ಚು ವೀಕ್ಷಣೆಯನ್ನು ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್ ಪಡೆದುಕೊಳ್ಳುತ್ತಿತ್ತು. ಇದೀಗ ರಾಹುಲ್ ಗಾಂಧಿ ಅವರ ಜನಪ್ರಿಯತೆ ಹೆಚ್ಚುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ.
52 ಲಕ್ಷಕ್ಕೂ ಅಧಿಕ ಸಬ್ ಸ್ಕ್ರೈಬರ್ಸ್ ಹೊಂದಿರುವ ರಾಹುಲ್ ಗಾಂಧಿ ಅವರ ಚಾನೆಲ್, ಒಂದು ತಿಂಗಳ ಅವಧಿಯಲ್ಲಿ 304.1 ಮಿಲಿಯನ್ ವೀಕ್ಷಣೆ ಪಡೆದಿದೆ.
3.2 ಮಿಲಿಯನ್ ಗಂಟೆ ವೀಕ್ಷಣಾ ಅವಧಿಯನ್ನು ರಾಹುಲ್ ಗಾಂಧಿ ಅವರ ಚಾನೆಲ್ ಹೊಂದಿರುವುದು ಹೊಸ ದಾಖಲೆಯೇ ಸರಿ. ಇದು ರಾಜಕೀಯ ವ್ಯಕ್ತಿಗಳಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಚಾನೆಲ್ ಆಗಿದೆ.