ಅಪರಾಧ ರಾಜಕೀಯ ಸುದ್ದಿ

ಎಸ್ಐಟಿ ಪ್ರಜ್ವಲ್ ಬ್ಯಾಂಕ್ ಅಕೌಂಟ್ ಸೀಝ್ ಮಾಡಿಸಿದ್ರೂ ಪ್ರಯೋಜನವಿಲ್ಲ!

Share It

ಬೆಂಗಳೂರು:

ಮಹತ್ವದ ಬೆಳವಣಿಗೆಯಲ್ಲಿ ಎಸ್ಐಟಿ ಬಹಳ ತಡವಾಗಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳ ಆರೋಪಿ ಪ್ರಜ್ವಲ್ ರೇವಣ್ಣನ ಎಲ್ಲಾ ಬ್ಯಾಂಕ್ ಅಕೌಂಟ್ ಗಳನ್ನು ಸೀಝ್ ಮಾಡಲು ಬ್ಯಾಂಕ್ ಗಳಿಗೆ ಮನವಿ ಸಲ್ಲಿಸಲು ಮುಂದಾಗಿದೆ.

ಆದರೆ ಅಷ್ಟರಲ್ಲೇ ಪ್ರಜ್ವಲ್ ರೇವಣ್ಣ ಯುರೋಪಿನ ಜರ್ಮನಿ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ತನ್ನ ಬ್ಯಾಂಕ್ ಅಕೌಂಟ್ ಗಳಲ್ಲಿದ್ದ ಹಣವನ್ನು ವಿದೇಶಿ ಬ್ಯಾಂಕ್ ಅಕೌಂಟ್ ಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ನ್ಯೂಸ್ ಬಹಿರಂಗವಾಗಿದೆ.

ಇದರಿಂದ ಎಸ್ಐಟಿ ಇದೀಗ ಪ್ರಜ್ವಲ್ ರೇವಣ್ಣನ ಬ್ಯಾಂಕ್ ಅಕೌಂಟ್ ಗಳನ್ನೆಲ್ಲಾ ಸೀಝ್ ಮಾಡಿಸಿದರೂ ಸದ್ಯ ಯೂರೋಪ್ ಖಂಡದಲ್ಲೇ ಇದ್ದು ವಿದೇಶಿ ಅಕೌಂಟ್ ಗಳನ್ನು ಉಪಯೋಗಿಸಿ ಹಣ ಬಳಸಲು ಪ್ರಜ್ವಲ್ ರೇವಣ್ಣ ಶುರು ಮಾಡಿದ್ದಾರೆ ಎಂಬ ರಹಸ್ಯ ಹೊರಬಿದ್ದಿದೆ.


Share It

You cannot copy content of this page