ಬೆಂಗಳೂರು:
18 ರ ನಂಟು ಆರ್.ಸಿ.ಬಿ ಟೀಂಗೆ ಸದಾ ಗೆಲುವು ತಂದಿದೆ.
ನಿನ್ನೆ ಅಂದರೆ ಶನಿವಾರ ಮೇ 18ರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಸ್ ಸೋತರೂ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು.
ಈ ಮೂಲಕ ಪ್ಲೇ-ಆಫ್ ಪ್ರವೇಶಿಸಲು ಆರ್.ಸಿ.ಬಿ ಪ್ರತಿ ಸ್ಪರ್ಧಿ ಸಿ.ಎಸ್.ಕೆ ತಂಡವನ್ನು 18 ರನ್ ಗಳ ಒಳಗೆ ಅಂದರೆ 200 ರನ್ ಗಳಿಗೆ ನಿಯಂತ್ರಿಸಿ ರನ್ ರೇಟ್ ಆಧಾರದ ಮೇಲೆ ಪ್ಲೇ-ಆಫ್ ಪ್ರವೇಶಿಸಲು ಅವಕಾಶ ಇತ್ತು. ಬಹಳ ಕಷ್ಟವಾಗಿದ್ದ ಈ 18 ರ ಸಾಧನೆಯನ್ನು ಆರ್.ಸಿ.ಬಿ ಆಶ್ಚರ್ಯ ಎಂಬಂತೆ ಕೊನೆಯ ಓವರ್ ನಲ್ಲಿ 27 ರನ್ ಗಳಿಂದ ಗೆದ್ದು ಬೀಗಿತು.
ಕೊನೆಗೂ 18 ರ ನಂಟು ಆರ್.ಸಿ.ಬಿ ತಂಡವನ್ನು ಕೈಬಿಡದೆ ಪ್ಲೇ-ಆಫ್ ಪ್ರವೇಶಿಸಲು ಅವಕಾಶ ಕಲ್ಪಿಸಿತು. ಏಕೆಂದರೆ ಈ ನಿರ್ಣಾಯಕ ಪಂದ್ಯದಲ್ಲಿ ಪ್ಲೇ-ಆಫ್ ಪ್ರವೇಶಿಸಲು ಆರ್.ಸಿ.ಬಿ ತಂಡ ರನ್ ರೇಟ್ ಪ್ರಕಾರ 18 ರನ್ ಗಳ ಅಂತರದಿಂದ ಗೆದ್ದರೆ ಮಾತ್ರ ಅವಕಾಶ ಇತ್ತು. ಇಲ್ಲದಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ 17 ರನ್ ಗಳ ಅಂತರದಿಂದ ಅಂದರೆ 201 ರನ್ ಗಳಿಸಿ ಸೋತಿದ್ದರೂ ಪ್ಲೇ-ಆಫ್ ಪ್ರವೇಶಿಸುತ್ತಿತ್ತು.
ಕಾರಣ ಚೆನ್ನೈ ತಂಡದ ರನ್ ರೇಟ್ ಸರಾಸರಿ ಆರ್.ಸಿ.ಬಿ ಗಿಂತ ಈ ಪಂದ್ಯಕ್ಕೂ ಮುನ್ನ ಹೆಚ್ಚಿತ್ತು. ಆದರೆ ಚೆನ್ನೈ ತಂಡವನ್ನು 20 ಓವರುಗಳಲ್ಲಿ 7 ವಿಕೆಟ್ ಗೆ 191 ರನ್ ಗಳಿಗೆ ಕಟ್ಟಿ ಹಾಕಿ ಬೆಂಗಳೂರು ತಂಡ ರನ್ ರೇಟ್ ಆಧಾರದ ಮೇಲೆ ಪ್ಲೇ-ಆಫ್ ಪ್ರವೇಶಿಸಿತು.
ಚೆನ್ನೈ ಮತ್ತು ಬೆಂಗಳೂರು ತಂಡಗಳು 14 ಪಂದ್ಯಗಳಿಂದ ತಲಾ 7 ಸೋತು, 7 ಗೆದ್ದರೂ ರನ್ ರೇಟ್ ಆಧಾರದ ಮೇಲೆ ಬೆಂಗಳೂರು ಪ್ಲೇ-ಆಫ್ ಪ್ರವೇಶಿಸಲು ಸಾಧ್ಯವಾಯಿತು. ಆದಾಗ್ಯೂ ಈವರೆಗಿನ ಎಲ್ಲಾ ಐಪಿಎಲ್ ಪಂದ್ಯಗಳಲ್ಲಿ ಆರ್.ಸಿ.ಬಿ ತಂಡ ಗೆದ್ದು ಬೀಗಿದೆ.
ಅದರಂತೆ ಮೇ 18 ರಂದು ನಡೆದ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ತಂಡ 218 ರನ್ ಗಳಿಸಿ ಗೆದ್ದು ಪ್ಲೇ-ಆಫ್ ಪ್ರವೇಶಿಸಲು ಅವಕಾಶ ಪಡೆದಿದೆ.
ಮುಗಿದೇ ಹೋಯ್ತು ಆರ್.ಸಿ.ಬಿ ಪ್ಲೇ-ಆಫ್ ಅವಕಾಶ ಅಂದಾಗಲೇ ಸತತ 6 ಪಂದ್ಯಗಳಲ್ಲಿ ಸತತ ಭರ್ಜರಿ ಗೆಲುವು ಸಾಧಿಸಿ ಅತ್ಯಾಶ್ಚರ್ಯ ಎಂಬಂತೆ ಪ್ಲೇ-ಆಫ್ ಪ್ರವೇಶಿಸಿದೆ ಡು-ಪ್ಲೆಸಿಸ್ ಪಡೆ.
ಒಟ್ಟಾರೆ 18 ರ ನಂಟು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಹೇಗೆ ಅದೃಷ್ಟದ ಸಂಖ್ಯೆ ಎಂಬುದು ನಿನ್ನೆ ಮೇ 18 ರ ರಾತ್ರಿ ಋಜುವಾಯಿತು.
ಅಲ್ಲಿಗೆ ಸಂಖ್ಯಾಶಾಸ್ತ್ರದ ಭವಿಷ್ಯ ನಿಜವಾಯಿತು ಎಂದು ಹೇಳಬಹುದು.