ಒಳ್ಳೆದಕ್ಕೆಲ್ಲ ಮೋದಿ, ಮೋದಿ, ಕೆಡುಕಾಯ್ತಂದ್ರೆ ಮಾಯ !
ಗೌಡ ಅಂದ್ರೆ ಹೋಯ್ ಅಂದ್ನಂತೆ, ನಾಲಕ್ ಆಳಿಗ್ ಮುಂದ್ದೆ ಅಂತಿದ್ದಂಗೆ ಮಾತ್ನೆ ಬಿಟ್ನಂತೆ ಅನ್ನೋದು ಹಳೇ ಮೈಸೂರು ಭಾಗದ ಒಂದು ಪ್ರಚಲಿತ ಗಾದೆ ಮಾತು. ಈ ಮಾತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ಮಾಡಿಸಿದಂತಿದೆ.
ನರೇಂದ್ರ ಮೋದಿ ಕಳೆದ ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ. ವಿರೋಧ ಏನೇ ಇರಲಿ ಕೆಲವೊಂದಿಷ್ಟು ಸಾಧನೆ, ಕೆಲಸ ಮಾಡಿದ್ದಾರೆ. ಈ ನಡುವೆ ಅವರು ತೆಗೆದುಕೊಳ್ಳೋ ನಿರ್ಧಾರಗಳು, ಅವರನ್ನು ವಿಶ್ವಗುರು ಎಂದು ಇನ್ನೇನು ಒಪ್ಪಿಕೊಳ್ಳಬೇಕು ಎಂದುಕೊಂಡಿದ್ದ ಕೆಲವರನ್ನು ಗೊಂದಲಕ್ಕೆ ದೂಡುತ್ತಿದೆ.
ಇದೇ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದ್ದ ಬಿಜೆಪಿ ರಾಜ್ಯ ನಾಯಕರು, ಮೋದಿ ನಮಗೆ ಕರೋನಾ ಲಸಿಕೆ ಕೊಡಿಸಿ ನಮ್ಮ ಪ್ರಾಣ ಉಳಿಸಿದ್ದಾರೆ. ಹೀಗಾಗಿ, ನಾವೆಲ್ಲ ಮೋದಿ ಅವರ ಋಣ ತೀರಿಸಲು ಬಿಜೆಪಿ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಮತ ಕೊಟ್ಟು ಗೆಲ್ಲಿಸಬೇಕು ಎಂದು ಭಾಷಣ ಮಾಡಿದ್ದರು. ಆದರೆ, ಇದೀಗ ದಿಢೀರ್ ಎಂದು ವರಸೆ ಬದಲಾಗಿದೆ. ಈ ಭಾಷಣವನ್ನು ಎಲ್ಲಿಯೂ ಅಪ್ಪಿತಪ್ಪಿಯೂ ಬಿಜೆಪಿ ನಾಯಕರು ಮಾಡುತ್ತಿಲ್ಲ.
ಇದಕ್ಕೆಲ್ಲ ಕಾರಣವಾಗಿದ್ದು ಕೋವಿಶೀಲ್ಡ್. ಕರೋನಾ ಲಸಿಕೆಯನ್ನು ಸರಿಯಾದ ಸಿದ್ಧತೆ ಇಲ್ಲದೆಯೇ ಇಡೀ ದೇಶಕ್ಕೆ ಕೊಡಲು ಮುಂದಾದ ಕ್ರಮವನ್ನು ಅನೇಕ ತಜ್ಞರು ಖಂಡಿಸಿದ್ದರು. ಆದರೆ, ಆಗ ಅವರನ್ನು ದೇಶದ್ರೋಹಿಗಳು ಎನ್ನಲಾಯಿತು. ಬದುಕಿನ ಆಸೆಯನ್ನಿಟ್ಟುಕೊಂಡು ಕೋಟ್ಯಂತರ ಜನ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡರು. ಲಸಿಕೆ ವಿತರಣೆ ಮಾಡಿದ ಸರಕಾರ, ಲಸಿಕೆ ಪಡೆದ ದೃಢೀಕರಣ ಪತ್ರದ ಮೇಲೆ ಮೋದಿ ಚಿತ್ರ ಹಾಕಿ, ಮೈಲೇಜ್ ಪಡೆದುಕೊಂಡಿತು.
ಆದರೆ, ಇದೀಗ ಕೋವಿಶೀಲ್ಡ್ ತಯಾರಿಸಿದ ಅಸ್ಟ್ರಾಜನಿಕ್ ಕಂಪನಿ, ಕೋವಿಶೀಲ್ಡ್ ಲಸಿಕೆಯಿಂದ ಮೆದುಳಿನ ಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತದಂತಹ ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ಬ್ರಿಟೀಷ್ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದೆ. ಕೋವಿಶೀಲ್ಡ್ ಲಸಿಕೆ ಪಡೆದ ಜನರಲ್ಲಿ ಆತಂಕ ಮನೆ ಮಾಡಿದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಕೋವಿಶೀಲ್ಡ್ ಈ ಹಿಂದೆ ಅನೇಕ ಗಣ್ಯರ ಸಾವಿಗೆ ಕಾತಣವಾಗಿದೆ ಎಂಬ ಆರೋಪಗಳು ಅಲ್ಲಲ್ಲಿ ಕೇಳಿಬಂದಿವೆ. ಇನ್ನು ಸಣ್ಣ ವಯಸ್ಸಿನ ಹುಡುಗರು, ಯುವ ಜನತೆ ಹೃದಯಾಘಾತದಿಂದ ಸಾವನ್ನಪ್ಪಿದ್ದಕ್ಕೆ ಲಸಿಕೆಯೇ ಕಾರಣ ಎಂಬ ಮಾತು ಕೇಳಿಬಂದಿದೆ. ಆ ಕಂಪನಿಯಿಂದ ಬಾಂಡ್ ರೂಪದಲ್ಲಿ ಬಿಜೆಪಿ ದೊಡ್ಡ ಕಿಕ್ ಬ್ಯಾಕ್ ಪಡೆದಿದೆ ಎಂಬ ಆರೋಪವೂ ಕೂಡ ಇದೆ. ಇದೆಲ್ಲದರ ನಡುವೆ ಕೋವಿಡ್ ಲಸಿಕೆ ಪಡೆದವರ ಪ್ರಮಾಣಪತ್ರದ ಮೇಲೆ ಇದ್ದ ಪ್ರಧಾನಿ ಮೋದಿ ಫೋಟೋವನ್ನು ತೆಗೆಯಲಾಗಿದೆ.
ಲಸಿಕೆ ಬರುತ್ತಿದ್ದಂತೆ ಜನರನ್ನು ಲಸಿಕೆ ಪಡೆಯಲು ಪ್ರೇರೇಪಿಸಲಾಯಿತು. ಲಸಿಕೆ ಪಡೆಯದಿದ್ದರೆ ಸರಕಾರಿ ಸೌಲಭ್ಯ ಖಡಿತ ಮಾಡಲಾಗುತ್ತದೆ ಎಂದು ಅನೌಪಚಾರಿಕ ಫರ್ಮಾನು ಹೊರಟಿತು. ಲಸಿಕೆ ದೇಶಕ್ಕೆ ಸಿಗಲು ಪ್ರಧಾನಿ ಮೋದಿಯೇ ಕಾರಣ ಎಂದು ಬಿಂಬಿಸಲಾಯಿತು. ನರೇಂದ್ರ ಮೋದಿ ಅವರ ಫೋಟೋವನ್ನು ಲಸಿಕೆಯ ದೃಡೀಕರಣ ಪತ್ರದ ಮೇಲೆ ನಮೂದಿಸಿ, ಲಸಿಕೆಯನ್ನು ಹೆಚ್ವು ಹೆಚ್ಚು ಜನರುಬಪೇಯುವಂತೆ ಪ್ರೇರೇಪಿಸಲಾಯಿತು.
ಕೋವಿಶೀಲ್ಡ್ ಬಗ್ಗೆ ಈಗ ಕೇಳಿಬಂದಿರುವ ಆತಂಕಕಾರಿ ಅಂಶಗಳ ಕುರಿತು ಲಸಿಕೆ ಪಡೆದ ಜನರೀಗ ಆತಂಕದ ಛಾಯೆಯಲ್ಲಿ ಮುಳುಗೇಳುತ್ತಿದ್ದಾರೆ. ಸಣ್ಣ ಪುಟ್ಟ ಸಾಂದರ್ಭಿಕ ಸಮಸ್ಯೆಗೂ ಲಸಿಕೆಯ ಮೇಲೆ ಅನುಮಾನ ಪಡುತ್ತಾ ತಮ್ಮ ಜೀವದ ಕುರಿತು ಆತಂಕಗೊಂಡಿದ್ದಾರೆ. ಅನೇಕರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಈ ನಡುವೆ ಮೋದಿ ಅವರ ಫೋಟೋ ಮಾಯವಾಗಿರುವುದು ಜನರನ್ನು ಮತ್ತಷ್ಟು ಭಯ ಬೀಳಿಸಿದೆ.
ಅಷ್ಟಕ್ಕೂ ಮೋದಿ ಅವರಿಗೆ ಇದ್ಯಾಕೆ ಇಂತಹ ಖಾಯಿಲೆ ಎಂಬುದು ಗೊತ್ತಾಗುತ್ತಿಲ್ಲ. ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದರೂ ಮೋದಿ ತಮ್ಮ ಫೋಟೋ ಮಾತ್ರ ಬಳಸಿಯೇ ಉದ್ಘಾಟನೆ ಮಾಡುತ್ತಾರೆ. ಹೊಸ ರೈಲು ಬಿಟ್ಟರೂ, ಮೋದಿಯೇ ಬರುತ್ತಿದ್ದರು. ಸಣ್ಣ ಸಣ್ಣ ಕಾರ್ಯಕ್ರಮಕ್ಕೂ ಮೋದಿ ಫೋಟೋ ಬಳಸಲಾಗುತ್ತದೆ.
ಈ ನಡುವೆ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದರೆ, ಬೇರೆ ಏನೋ ವಾದ ಮಾಡುವ ಜನರು, ಸುಪ್ರೀಂ ಕೋರ್ಟ್ ಕಾಎಂದ್ರ ಸರಕಾರಕ್ಕೆ ತಪರಾಕಿ ಕೊಟ್ಟು ಅನುದಾನ ಕೊಡಿಸಿದರೆ, ಮೋದಿ ಕೃಪೆಯಿಂದ ಬಂದ ಅನುದಾನ ಎಂದು ಬಿಲ್ಡಪ್ ಕೊಡುತ್ತಾರೆ ಬಿಜೆಪಿ ನಾಯಕರು. ಈಗ ಅದೇ ರೀತಿಯಲ್ಲಿ ಮೋದಿ ಲಸಿಕೆ ಎಂದು ಬೀಗುತ್ತಿದ್ದ ಕೋವಿಶೀಲ್ಡ್ ದೃಢೀಕರಣ ಪತ್ರದ ಮೇಲಿದ್ದ ಮೋದಿ ಫೋಟೋ ಮಾಯವಾಗಿದೆ.
ಹೀಗೆ, ಒಳ್ಳೆಯದ್ದಕ್ಕೆಲ್ಲ ಮೋದಿ, ಕೆಟ್ಟದಾದರೆ ಮಾಯ ಗೆದ್ದಾಗ ಮೋದಿ, ಸೋತಾಗ ಮಾತ್ರ ಮಾಯಾಗುವಂತಹ ಮನಸ್ಥಿತಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಕರಗತವಾಗಿದೆ. ಆದರೆ, ಮೋದಿ ಮತ್ತು ದೇಶದ ಪ್ರಧಾನಿ ಮೇಲೆ ನಂಬಿಕೆಯಿಟ್ಟು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವ ಅಮಾಯಕರ ಬಗ್ಗೆ ಯೋಚನೆ ಮಾಡುವವರು ಯಾರು ಎಂಬುದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ.