13 ವರ್ಷಗಳ ದಾಖಲೆ ಉಷ್ಣಾಂಶ: ರಾಜಧಾನಿಯಲ್ಲಿ ಹೆಚ್ಚುತ್ತಿವೆ ಸಾಂಕ್ರಾಮಿಕ ರೋಗ

145
Share It

ಬೆಂಗಳೂರು:ಬಿರುಬೇಸಿಗೆಯ ಧಗೆ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಸನ್ ಸ್ಟ್ರೋಕ್ ಮತ್ತು ಕಾಲರಾ ಹರಡುವ ಭೀತಿ ಎದುರಾಗುತ್ತಿದ್ದು, ಈ ಬಾರಿಯ ಬೇಸಿಗೆಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದೆ.

ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 27 ಡಿಗ್ರಿ ತಾಪಮಾನ ದಾಖಲಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 37.6 ಡಿಗ್ರಿ ದಾಖಲಾಗಿದೆ. ಕಲಬುರಗಿಯಲ್ಲಿ 42 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಕಳೆದ 15 ವರ್ಷಗಳಲ್ಲೇ ಇದು ಅತ್ಯಂತ ಹೆಚ್ಚಿನ ತಾಪಮಾನವಾಗಿದೆ.

ಬಿಸಿಲಿನ ತಾಪದಿಂದ ಏಕಾಏಕಿ ಶಂಕಿತ ಕಾಲರ, ಬಿಸಿಗಾಳಿ ಹೆಚ್ಚಾಗುತ್ತಿದೆ. ಬಿಸಿಲಿನಿಂದಾಗಿ ಕಲಬುರಗಿ, ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಆರೋಗ್ಯ ಇಲಾಖೆ ಇದ್ದನ್ನು ತಳ್ಳಿಹಾಕಿದೆ. ಬೆಂಗಳೂರಿನ ಮಲ್ಲೇಶ್ವರ ನಿವಾಸಿಗಳಲ್ಲಿ ಕಾಲರ ರೋಗ ಕಂಡು ಬಂದಿಲ್ಲ. ಇನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ 42 ವಿದ್ಯಾಥರ್ಿನಿಯರಲ್ಲಿ 32 ಜನರಲ್ಲಿ ಕಾಲರ ರೋಗ ಕಾಣಿಸಿಲ್ಲ ಎಂದು ತಿಳಿಸಿದ್ದಾರೆ.

ಮಾಚರ್್ನಲ್ಲಿ ಬೆಂಗಳೂರು ನಗರದಲ್ಲಿ ಇಬ್ಬರು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಮೂವರಿಗೆ ಕಾಲರ ಕಾಣಿಸಿಕೊಂಡ ಮಾಹಿತಿ ಲಭ್ಯವಾಗಿದೆ. ರಾಮನಗರದಲ್ಲಿ 1 ಪ್ರಕರಣ ಸೇರಿ ಒಟ್ಟು 6 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬಿಸಿಲು ಹೆಚ್ಚಾಗ್ತಿದ್ದಂತೆ ಸಾಂಕ್ರಾಮಿಕ ರೋಗಗಳು ಜನರನ್ನು ಕಾಡಲು ಶುರು ಮಾಡಿವೆ. ಡಿಹೈಡ್ರೇಷನ್, ಉಸಿರಾಟದ ಸಮಸ್ಯೆ , ಅತಿಸಾರ ಸೇರಿ ನಾನಾ ರೀತಿಯ ಕಾಯಿಲೆಗಳು ಬಾಧಿಸುತ್ತಿವೆ. ಇದರ ನಡುವೆ ಡೆಂಘೀ ಹಾಗೂ ಚಿಕನ್ ಗುನ್ಯಾ ಹೆಚ್ಚಾಗುತ್ತಿವೆ.

ಕಳೆದ ಮೂರು ತಿಂಗಳಿನಲ್ಲಿ 1663 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 535ಕೇಸ್ ದಾಖಲಾಗಿವೆ. ಒಟ್ಟಿನಲ್ಲಿ ಬಿರುಬಿಸಲ ಹೊಡೆತಕ್ಕೆ ಬೆಂಗಳೂರಿಗರು ಹೈರಾಣಾಗಿದ್ದಾರೆ. ಇದರ ಜೊತೆಗೆ ಕಾಲರ, ಡೆಂಘೀ ಅಂತಾ ರೋಗಗಳು ಹೆಚ್ಚಾಗಿವೆ. ಹೀಗಾಗಿ ಜನ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.


Share It

You cannot copy content of this page