ಉಪಯುಕ್ತ ಸುದ್ದಿ

ಬಿಕ್ಷೆ ಬೇಡಿ ಬದುಕುತ್ತಿದ್ದ ಆಂಧ್ರ ಮೂಲದ ವೃದ್ಧೆಯನ್ನು ಮರಳಿ ಗೂಡಿಗೆ ಸೇರಿಸಿದ ಪೊಲೀಸರು

Share It


ಚಿಕ್ಕಮಗಳೂರು:ಕುಟುಂಬವೆಲ್ಲ ಇದ್ದರೂ, ಕಳೆದೊಂದು ವರ್ಷದಿಂದ ಚಿಕ್ಕಮಗಳೂರು ನಗರದಲ್ಲಿ ಬಿಕ್ಷೆ ಬೇಡಿ ಬಡುಕುತ್ತಿದ್ದ ವೃದ್ಧೆಯೊಬ್ಬರನ್ನು ಮರಳಿ ಆಕೆಯ ಕುಟುಂಬದ ಜತೆ ಸೇರಿಸಲಾಗಿದೆ.

ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರು ನಗರದ ತಾಲೂಕ ಕಚೇರಿ ಸುತ್ತಮುತ್ತ 72 ವರ್ಷದ ವೃದ್ಧೆಯೊಬ್ಬರನ್ನು ನಿರ್ಗತಿಕಳಂತೆ ಅಲೆಯುತ್ತಿದ್ದರು. ಆಕೆಗೆ ಆಂಧ್ರ ಪ್ರದೇಶದಲ್ಲಿ ಕುಟುಂಬವಿದೆ ಎಂಭುದನ್ನು ಅರಿತ ತಹಶೀಲ್ದಾರ್, ಮಹಿಳಾ ಠಾಣೆ ಪೊಲೀಸರು ಹಾಗೂ ಸಹನಾ ರೂಬಿನ್ ಸಾಮಾಜಿಕ ಸೇವಾ ಸಂಸ್ಥೆ ಆಕೆಯನ್ನು ಮರಳಿ ಗೂಡಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಆಂಧ್ರಪ್ರದೇಶದ ಮದನಪಲ್ಲಿ ತಾಲೂಕಿನ ಅಚ್ಚಮ್ಮ ಹಲವು ದಿನಗಳಿಂದ ತಾಲೂಕು ಕಚೇರಿ ಬಳಿ ರಸ್ತೆ ಬದಿ ಬಿದ್ದ ಕಸವನ್ನೆಲ್ಲ ಒಂದುಗೂಡಿಸುತ್ತಾ, ಭಿಕ್ಷೆ ಬೇಡಿ ಜೀವನ ಮಾಡುತ್ತಾ ರಸ್ತೆ ಬದಿಯಲ್ಲೇ ಮಲಗುತ್ತಿದ್ದರು. ಇದನ್ನು ಕಂಡ ಚಿಕ್ಕಮಗಳೂರಿನ ತಹಶೀಲ್ದಾರ್, ವೃದ್ಧೆಯನ್ನು ಸಹನಾ ರೂಬಿನ್ ಟ್ರಸ್ಟ್ ಅವರಿಗೆ ನೋಡಿಕೊಳ್ಳುವಂತೆ ಹೇಳಿದ್ದರು. ರೂಬಿನ್ ಟ್ರಸ್ಟ್ ಆಕೆಗೆ ಊಟ – ಬಟ್ಟೆ ಕೊಟ್ಟು ಆಶ್ರಯ ನೀಡಿದ್ದರು. ಈ ವೇಳೆ ವೃದ್ಧೆಯು ಆಂಧ್ರಪ್ರದೇಶದ ಮದನಪಲ್ಲಿ ಜಿಲ್ಲೆಯ ವಾಸಿ, ಹಾಗೂ ಅವರಿಗೆ 2 ಗಂಡು ಮಕ್ಕಳು, 2 ಹೆಣ್ಣುಮಕ್ಕಳು ಇರುವುದಾಗಿ ತಿಳಿಸಿದ್ದಾರೆ.

ಕನ್ನಡ ಬಾರದ ಅವರು ತೆಲುಗು ಮಾತನಾಡುತ್ತಿದ್ದು, ಆರೋಗ್ಯವಾಗಿದ್ದ ವೃದ್ಧೆಯನ್ನು ಮಹಿಳಾ ಠಾಣೆ ಪೊಲೀಸರು, ತಹಶೀಲ್ದಾರ್ ಹಾಗೂ ರೂಬಿನ್ ಟ್ರಸ್ಟ್ ಮದನಪಲ್ಲಿ ಜಿಲ್ಲೆಯ ಅವರ ಮಕ್ಕಳನ್ನು ಸಂಪಕರ್ಿಸಿ ಅವರಿಗೆ ಒಪ್ಪಿಸಿದ್ದಾರೆ. ವರ್ಷದ ಹಿಂದೆ ಆಂಧ್ರದಪ್ರದೇಶದ ಮದನಪಲ್ಲಿಯಲ್ಲಿ ವೃದ್ಧೆ ನಾಪತ್ತೆಯಾಗಿದ್ದ ಸಂಬಂಧ ಪ್ರಕರಣ ಕೂಡ ದಾಖಲಾಗಿತ್ತು. ಆಕೆಯ ಕುಟುಂಬಸ್ಥರು ಖುಷಿಯಿಂದ ಆಕೆಯನ್ನು ಮರಳಿ ತಮ್ಮ ಗ್ರಾಮಕ್ಕೆ ಕರೆದೊಯ್ದಿದ್ದಾರೆ.


Share It

You cannot copy content of this page