ರಾಜಕೀಯ ಸುದ್ದಿ

ಅಜ್ಜಯ್ಯನ ಅಣತಿಯಂತೆ ಲೋಕ ಭವನದಲ್ಲಿಯೇ ಡಿಕೆ ಸಿಎಂ ಪ್ರಮಾಣ ವಚನ !

Share It

ಬೆಂಗಳೂರು: ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುವ ಕಾರ್ಯಕ್ರಮವನ್ನು ಸರಳವಾಗಿ ಲೋಕಭವನದಲ್ಲಿಯೇ ನಡೆಸಲು ಡಿಕೆ ಶಿವಕುಮಾರ್ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ

ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿದ್ಧತೆ ಮಾಡಿಕೊಳ್ಳಲು ಸರಕಾರ ತಿರ್ಮಾನಿಸಿತ್ತು. ಆದರೆ, ಡಿಕೆ ಶಿವಕುಮಾರ್ ಸರಳವಾಗಿ ರಾಜ್ಯಪಾಲರ ಮುಂದೆ ಲೋಖಭವನದಲ್ಲಿಯೇ ಪ್ರಮಾಣವಚನ ಸ್ವೀಕಾರ ಮಾಡುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಮಾತನಾಡಿರುವ ರಾಮಲಿಂಗ ರೆಡ್ಡಿ ಅವರು, ನನಗೆ ಸಿಎಂ ಕರ್ ಮಾಡಿ ಲೋಖಭವನಕ್ಕೆ ಬರುವಂತೆ ತಿಳಿಸಿದ್ದಾರೆ. ಹೀಗಾಗಿ ನಾನು ಹೋಗುತ್ತಿದ್ದೇನೆ. ಯಾವ ಖಾತೆ ಕೊಡುತ್ತಾರೆ ಎಂಬ ಬಗ್ಗೆ ಮಾಹಿತಿಯಿಲ್ಲ. ನನ್ನ ಅನುಭವಕ್ಕೆ ತಕ್ಕಂತೆ ಯಾವುದೇ ಖಾತೆ ನೀಡಿದರು ನಿಭಾಯಿಸುತ್ತೇನೆ ಎಂಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share It

You cannot copy content of this page