ಕಕ್ಕೇರಿ: ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಶ್ರೀ ಭಿಷ್ಟಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಮಂದಿರಕ್ಕೆ ಮಂಗಳವಾರದಂದು ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ಯ ಭಕ್ತರ ದಂಡು.
ಭಕ್ತರು ಮಂದಿರಕ್ಕೆ ಭೇಟಿ ನೀಡಿ ಬೇಡಿಕೊಂಡ ಹರಕೆ ಬಂಗಾರ, ಬೆಳ್ಳಿ , ಹಣ,ಉಡಿ ತುಂಬಿ , ಆಶೀರ್ವಾದ ಪಡೆದರು.
ಮಂದಿರದ ಮುಂದೆ ಭಕ್ತರು ಹೊಸ ವಾಹನಗಳು, ಟ್ರ್ಯಾಕ್ಟರ್,ಲಾರಿ, ದ್ವಿಚಕ್ರ ವಾಹನಗಳು, ತೆಗೆದುಕೊಂಡು ಬಂದು ಅರ್ಚಕರ ಕಡೆಯಿಂದ ಪೂಜೆ ಸಲ್ಲಿಸಿದರು.
ಕಕ್ಕೇರಿ, ಲಿಂಗನಮಠ,ಗುಂಡೊಳ್ಳಿ, ಗೋಧೋಳಿ ಚುಂಚವಾಡ, ಮಾಸ್ಕೆನಟ್ಟಿ, ಕರಿಕಟ್ಟಿ, ಸುರಪುರ ಕೇರವಾಡ, ಭೂರನಕಿ, ಸುರಪುರ, ದಡ್ಡಿ, ಹಿರೇಕರದಡ್ಡಿ, ಘಸ್ಟೋಳ್ಳಿ ,ಬೀಡಿ, ಸೇರಿದಂತೆ ಹಲವಾರು ಗ್ರಾಮಗಳಲ್ಲಿ ರೈತರು ಬಸವಣ್ಣನನ್ನು ಮಣ್ಣಿನಿಂದ ತಯಾರಿಸಿದರೆ, ಇನ್ನೂ ಕೆಲವ ರೈತರು ಕಮ್ಮಾರರು, ಬಡಿಗೇರರು, ಮಣ್ಣಿನಿಂದ ತಯಾರಿಸಿ ಬಣ್ಣ ಹಚ್ಚಿರುವ ಬಸವಣ್ಣನನ್ನು ತಂದು ಪೂಜಿಸಿದರು.
ಕಕ್ಕೇರಿಯ ಭಿಷ್ಟಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಮಂದಿರಕ್ಕೆ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಭಕ್ತರ ದಂಡು

