ಬೆಳಗಾವಿ : ಜೆಸಿಬಿಗೆ ಸಿಲುಕಿ ಮೂರು ವರ್ಷದ ಬಾಲಕಿ ಮೃತಪಟ್ಟ ಘಟನೆ ಚಿಕ್ಕೋಡಿ ತಾಲೂಕಿನ ಕಬ್ಬೂರಿನ ಹನುಮಾನ್ ನಗರ ತೋಟದ ಬಳಿ ಗುರುವಾರ ನಡೆದಿದೆ.
ಜೆಸಿಬಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಭೂಮಿಕಾ ರಮೇಶ್ ಕೂಕನೂರ (3)ಮೃತಪಟ್ಟ ಬಾಲಕಿ. ಪಟ್ಟಣ ಪಂಚಾಯಿತಿ ವತಿಯಿಂದ ಜಲಕುಂಭ ಕಾಮಗಾರಿಯನ್ನು ರಮೇಶ್ ಕೂಕನೂರ ಅವರ ಮನೆಯ ಮುಂದಿನ ರಸ್ತೆಯ ಬಳಿ ಪೈಪ್ಲೈನ್ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅಲ್ಲೇ ಆಟವಾಡುತ್ತಿದ್ದ ಬಾಲಕಿ ಜೆಸಿಬಿಗೆ ಸಿಲುಕಿ ಮೃತಪಟ್ಟಿದ್ದು ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.